ಉಮ್ರಾ ಯಾತ್ರೆಗೆ ತೆರಳಿದ್ದ ಬೆಳ್ಳಾರೆಯ ಉಮ್ಮರ್ ಮಕ್ಕಾದಲ್ಲಿ ನಿಧನ

0

ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ಸೌದಿ ಅರೇಬಿಯಾದ ಮೆಕ್ಕಾಗೆ ತೆರಳಿದ್ದ ಬೆಳ್ಳಾರೆಯ ಪಳ್ಳಿ ಬಳಿಯ ನಿವಾಸಿ ಬೆಳ್ಳಾರೆ ಜಮಾಯತ್ ಸದಸ್ಯ ಉಮ್ಮರ್‌ರವರು ಮಾ.೩೦ ರಂದು ಮಕ್ಕಾದಲ್ಲಿ ನಿಧನರಾದರು.


ಕಳೆದ ೧೫ದಿನಗಳ ಹಿಂದೆ ಉಮ್ರಾ ನಿರ್ವಹಿಸಲು ಮಕ್ಕಾಗೆ ತೆರಳಿದ್ದರು.
ನಿನ್ನೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು. ಇಂದು ಅವರು ಮೃತಪಟ್ಟರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ.