ಸುಳ್ಯ ಸರಕಾರಿ ಆಸ್ಪತ್ರೆಯ ಡಿ.ಗ್ರೂಪ್ ನೌಕರ ಹುಕ್ರಪ್ಪ ನಾಯ್ಕ ಜೆ.ನಿವೃತ್ತಿ

0

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಗ್ರೂಪ್ ಡಿ. ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಕ್ರಪ್ಪ ನಾಯ್ಕ ಜೆ.ಯವರು ಮಾ.೩೧ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

೧೯೯೧ ಸೇವೆಗೆ ಸೇರಿದ ಇವರು, ಕಳೆದ ೩೧ ವರ್ಷಗಳಿಂದ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಇವರು ಸುಳ್ಯ ಬೀರಮಂಗಲ ನಿವಾಸಿಯಾಗಿದ್ದು, ಪತ್ನಿ ಸರೋಜಿನಿ ಗೃಹಿಣಿಯಾಗಿದ್ದಾರೆ. ಮೂವರು ಪುತ್ರರು ಉದ್ಯೋಗದಲ್ಲಿದ್ದಾರೆ.

ಆಸ್ಪತ್ರೆಯ ವತಿಯಿಂದ ಬೀಳ್ಕೊಡುಗೆ : ನಿವೃತ್ತಿ ಹೊಂದಿದ ಇವರಿಗೆ ಮಾ. 31 ರಂದು ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿಗಳು, ದಾದಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.