ಎ.3: ವಳಲಂಬೆ ನೇರಳಾಡಿ ಶ್ರೀ ಮಲೆದೈವಗಳ ನೇಮೋತ್ಸವ, ಜಾಲಾಟ

0

ವಳಲಂಬೆಯ ನೇರಳಾಡಿ ದೈವಸ್ಥಾನದಲ್ಲಿ ಶ್ರೀ ಮಲೆ ದೈವಗಳ ನೇಮೋತ್ಸವ (ಜಾಲಾಟ) ಎ.3 ರಂದು ನಡೆಯಲಿದೆ.
ಎ.2 ರಂದು ಬೆಳಿಗ್ಗೆ ಪೂಜಾರಿಗಳ ಕಲಶ ಸ್ನಾನ, ಬಳಿಕ 1೦.೦೦ ಗಂಟೆಗೆ ನೇರಳಾಡಿ ಸ್ಥಾನದಲ್ಲಿ ಶ್ರೀ ದೈವಗಳ ಗುಂಡದ ಕೋಲು ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ದಂಬೆಕೋಡಿ ಭಂಡಾರ ಚಾವಡಿಯಿಂದ ನೇರಳಾಡಿ ಸ್ಥಾನಕ್ಕೆ ಭಂಡಾರ ಬರುವುದು. ಎ.3 ರ ಪ್ರಾತಃಕಾಲ 5 ಗಂಟೆ ಶ್ರೀ ಉಳ್ಳಾಕುಲು ದೈವದ ನೇಮ, ಬಳಿಕ ಬೆಳಿಗ್ಗೆ 1೦.3೦ಕ್ಕೆ ಶ್ರೀ ಪುರುಷ ದೈವದ ನೇಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 3.೦೦ ಗಂಟೆಗೆ ಶ್ರೀ ಮಲೆ ಚಾಮುಂಡಿ ದೈವದ ನೇಮ, ಸಂಜೆ 6.3೦ಕ್ಕೆ ಕಾರಣಿಕದ ಅಜ್ಜಿ ದೈವ (ಅಮ್ಮಜ್ಜಿ) ನೇಮ ನಡೆಯಲಿದೆ. ರಾತ್ರಿ ನೇರಳಾಡಿ ದೈವಸ್ಥಾನದಲ್ಲಿ ಅಜ್ಜಿ ದೈವಕ್ಕೆ ಹರಿಕೆ ಒಪ್ಪಿಸುವುದು, ಪ್ರಸಾದ ವಿತರಣೆ ಕಾರ್ಯಕ್ರಮ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗುಳಿಗನಿಗೆ ಕೋಲ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಮಾ.29 ರಂದು ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.