ಕರ್ನಾಟಕ ಫ್ಯಾಶನ್ ಷೋ ಸ್ಪರ್ಧೆಯಲ್ಲಿ ಸಮೃದ್ಧಿಗೆ ಮೊದಲ ರನ್ನರ್ ಆಫ್ ಪ್ರಶಸ್ತಿ

0

ಮೈಸೂರಿನ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತಿನ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಮಾ. 31ರಂದು ನಡೆದ ಕರ್ನಾಟಕ ಫ್ಯಾಷನ್ ಸ್ಪರ್ಧೆಯ 4 ರಿಂದ 9 ವರ್ಷದ ಮಕ್ಕಳ ವಿಭಾಗದಲ್ಲಿ ಕು. ಸಮೃದ್ಧಿ ಮೊದಲ ರನ್ನರ್ ಆಫ್ ಪ್ರಶಸ್ತಿ ಮುಡುಗೇರಿಸಿಕೊಂಡಿದ್ದಾಳೆ.

ಈಕೆ ಗೂನಡ್ಕ ಬೀಜದಕಟ್ಟೆ ನಿವಾಸಿ ಸದಾನಂದ ಮತ್ತು ಸುಳ್ಯ ನಗರ ಪಂಚಾಯತ್ ಉದ್ಯೋಗಿ
ಆಶಾ ಬಿ.ಆರ್. ದಂಪತಿಗಳ ಪುತ್ರಿ.

ಮಾರುತಿ ಐಪಿಎಸ್ ನಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.