ಮತದಾನ ಜಾಗೃತಿಗಾಗಿ ಸುದ್ದಿ ಮತದಾರರ ಕಡೆಗೆ

0

ಅರಂತೋಡಿನಲ್ಲಿ ” ಸುದ್ದಿ ಚುನಾವಣಾ ಕುರುಕ್ಷೇತ್ರ “

ನಾಯಕರಿಂದ ಸಮಸ್ಯೆಗೆ ಸ್ಪಂದಿಸುವ ಭರವಸೆ; ಮತದಾರರಿಂದ ಬೇಡಿಕೆಗಳ ಪ್ರಸ್ತಾಪ

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ “_ಚುನಾವಣಾ ಕುರುಕ್ಷೇತ್ರ ” ಎಂಬ ವಿನೂತನ ಕಾರ್ಯಕ್ರಮ ಅರಂತೋಡಿನಲ್ಲಿ ಇಂದು ಬೆಳಿಗ್ಗೆ ಚಿತ್ರೀಕರಣಗೊಂಡಿತು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ, ನಿವೃತ್ತ ಅಧ್ಯಾಪಕ ಜತ್ತಪ್ಪ ಮಾಸ್ತರ್ ಅಳಿಕೆ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಉಪಾಧ್ಯಕ್ಷ, ಬಿಜೆಪಿ ಮುಖಂಡ ದಯಾನಂದ ಕುರುಂಜಿ, ಅರಂತೋಡು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನೂರು, ತೋಟಂಪ್ಪಾಡಿ ಉಳ್ಳಾಕುಳು ದೈವಸ್ಥಾನದ ಅಧ್ಯಕ್ಷ , ಬಿಜೆಪಿ ಮುಖಂಡ ಕಿಶೋರ್ ಉಳುವಾರು, ಮಾಜಿ ಜಿ.ಪಂ. ಸದಸ್ಯ ಸತೀಶ್ ನಾಯ್ಕ ಅರಂತೋಡು, ಕಾಂಗ್ರೆಸ್ ಮುಖಂಡ ತೀರ್ಥರಾಮ ಪರ್ನೋಜಿ, ಅಶ್ರಫ್ ಗುಂಡಿ, ತಾಜುದ್ಧೀನ್ ಅರಂತೋಡು, ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಸುರೇಶ್ ಉಳುವಾರು , ವೆಂಕಟ್ರಮಣ ಮೇರ್ಕಜೆ, ಮುಕುಂದ ದೇರಾಜೆ, ಅಣ್ಣಾ ದೊರೈ, ಗೋಪಾಲ ಅಳಿಕೆ, ಉಮ್ಮರ್ , ಶರೀಫ್, ಶ್ರೀಮತಿ ನಾಗವೇಣಿ ಶಿವಪ್ಪ ಭಾಗವಹಿಸಿದ್ದರು.

ಕ್ಷೇತ್ರದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ಸುಳ್ಯ ವಿಧಾನಸಭಾ ಕ್ಷೇತ್ರದ ಮೀಸಲಾತಿ ರೊಟೇಷನ್ , ರೈಲ್ವೆ ಯೋಜನೆ, ಪ್ರವಾಸೋದ್ಯಮ ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾಯಿತು.

ಸುದ್ದಿ ವರದಿಗಾರರಾದ ಕೃಷ್ಣ ಬೆಟ್ಟ, ವಿನಯ್ ಜಾಲ್ಸೂರು, ಕುಶಾಂತ್ ಕೊರತ್ಯಡ್ಕ, ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ತಾಂತ್ರಿಕ ವಿಭಾಗದ ಶ್ರೀಧಾಮ ಅಡ್ಕಾರು, ಅನಿಲ್ ಸಂಪ, ಶ್ರೀಜಿತ್ ಸಂಪಾಜೆ ಸಹಕರಿಸಿದರು.