ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮ ಕಲಶ ಮಹೋತ್ಸವ ಮಾ. 30ರಿಂದ ಏ. 4ರ ತನಕ ನಡೆಯಿತು.
















ಮಾ. 3ರಂದು ವಿವಿಧ ವೈದಿಕ ಕಾರ್ಯಗಳು, ಸಂಜೆ ಭಜನಾ ಸಂಕೀರ್ತನೆ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಗಜೇಂದ್ರ ಮೋಕ್ಷ ನಡೆಯಿತು. ಏ. 4ರಂದು ಬೆಳಿಗ್ಗೆ ಮಹಾಗಣಪತಿ ಹೋಮ ಬಳಿಕ 9.40ರಿಂದ 10.30ರ ವರೆಗೆ ನಡೆಯುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಸದಾಶಿವ ದೇವರಿಗೆ ಅಷ್ಟಬಂಧ ಕ್ರಿಯೆ, ಕಲಶಾಭಿಷೇಕ ನಡೆಯಿತು. ರಾತ್ರಿ ಶ್ರೀ ಸದಾಶಿವ ದೇವರಿಗೆ ರಂಗಪೂಜೆ ನಡೆಯಿತು.










