ನೇರಳಾಡಿ – ವಳಲಂಬೆ ಶ್ರೀ ಮಲೆದೈವಗಳ ನೇಮೋತ್ಸವ,ಜಾಲಾಟ

0

ವಳಲಂಬೆಯ ನೇರಳಾಡಿ ದೈವಸ್ಥಾನದಲ್ಲಿ ಶ್ರೀ ಮಲೆ ದೈವಗಳ ನೇಮೋತ್ಸವ (ಜಾಲಾಟ) ಏ.3 ರಂದು ನಡೆಯಿತು.

ಏ.2 ರಂದು ಬೆಳಿಗ್ಗೆ
ಪೂಜಾರಿಗಳ ಕಲಶ ಸ್ನಾನ ಮಾಡಲಾಗಿ ನೇರಳಾಡಿ ಸ್ಥಾನದಲ್ಲಿ ಶ್ರೀ ದೈವಗಳ ಗುಂಡದ ಕೋಲು ಹೊಡೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ದಂಬೆಕೋಡಿ ಭಂಡಾರ ಚಾವಡಿಯಿಂದ ನೇರಳಾಡಿ ಸ್ಥಾನಕ್ಕೆ ಭಂಡಾರ ತರಲಾಯಿತು. ಏ.3 ರ ಪ್ರಾತಃ ಕಾಲ ಶ್ರೀ ಉಳ್ಳಾಕುಲು ದೈವದ ನೇಮ, ಬಳಿಕ ಶ್ರೀ ಪುರುಷ ದೈವದ ನೇಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು, ಅಪರಾಹ್ನ ಶ್ರೀ ಮಲೆ ಚಾಮುಂಡಿ ದೈವದ ನೇಮ ನಡೆಯಿತು. ಸಂಜೆ ಕಾರಣಿಕದ ಅಜ್ಜಿ ದೈವ (ಅಮ್ಮಜ್ಜಿ) ನೇಮ ನಡೆಯಲಿದೆ. ರಾತ್ರಿ ನೇರಳಾಡಿ ಅಜ್ಜಿ ದೈವಕ್ಕೆ ಹರಿಕೆ ಒಪ್ಪಿಸುವ ಕಾರ್ಯಕ್ರಮ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

ರಾತ್ರಿ ಅನ್ನಸಂತರ್ಪಣೆ ನಡೆದು ಗುಳಿಗ ದೈವದ ಕೋಲ ನಡೆದು ಪ್ರಸಾದ ವಿತರಣೆ ನಡೆಯಿತು. ಆಡಳಿತ ಮಂಡಳಿಯ ಪದಾಧಿಕಾರಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಊರ ಭಕ್ತಾದಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.