ದೇವಚಳ್ಳ : ಸಮತೋಲನ ಆಹಾರ ಆರೋಗ್ಯ ಮಾದರಿಗಳ ಬಗ್ಗೆ ಕಾರ್ಯಕ್ರಮ

0

ಆಯುಷ್ಮಾನ್ ಆರೋಗ್ಯ ಮಂದಿರ ಎಲಿಮಲೆ, ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇದರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯಕರ ಜೀವನ, ಧೂಮಪಾನ ಮತ್ತು ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳು, ಸಮತೋಲನ ಆಹಾರ ಆರೋಗ್ಯ ಮಾದರಿಗಳ ಬಗ್ಗೆ ಕಾರ್ಯಕ್ರಮವು ಎ.5ರಂದು ನಡೆಯಿತು.

ಇದೇ ಸಂದರ್ಭ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಂಧ್ಯಾ, ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ್ ಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಯಾನಂದ ಪಟ್ಟೆ , ತೀರ್ಪುಗಾರರಾದ ಶ್ರೀಮತಿ ಹರಿಣಾಕ್ಷಿ ಹಾಗೂ ದಯಾನಂದ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಮೋನಿಷಾ ಜಿ.ಎಸ್. ನಿರೂಪಿಸಿದರು.