ಮತದಾನ ಜಾಗೃತಿಗಾಗಿ ಸುದ್ದಿ ಮತದಾರರ ಕಡೆಗೆ

0

ಹರಿಹರ ಪಲ್ಲತಡ್ಕದಲ್ಲಿ ಸುದ್ದಿ ಚುನಾವಣಾ ಕುರುಕ್ಷೇತ್ರ

ಕಸ್ತೂರಿ ರಂಗನ್ ವರದಿ, ನಕ್ಸಲ್ ಹಾವಳಿ, ಅಡಿಕೆ ಹಳದಿ ರೋಗ ಬಗ್ಗೆ ಉಭಯ ಪಕ್ಷಗಳು ಪ್ರಸ್ತಾಪಿಸುತ್ತಿಲ್ಲ ಯಾಕೆ : ಮತದಾರರ ಪ್ರಶ್ನೆ

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ “_ಚುನಾವಣಾ ಕುರುಕ್ಷೇತ್ರ ” ಎಂಬ ವಿನೂತನ ಕಾರ್ಯಕ್ರಮ ಹರಿಹರ ಪಲ್ಲತಡ್ಕದಲ್ಲಿ ಇಂದು ಚಿತ್ರೀಕರಣಗೊಂಡಿತು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಕಾಂಗ್ರೆಸ್, ಬಿಜೆಪಿ ಮುಖಂಡರು, ಮತದಾರರು ಪಾಲ್ಗೊಂಡರು. ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಸತೀಶ್ ಕೂಜುಗೋಡು, ಹರಿಹರ ಪಲ್ಲತಡ್ಕ ಗ್ರಾ.ಪಂ ಮಾಜಿ ಅಧ್ಯಕ್ಷ ಹಿಮ್ಮತ್ ಕೆ.ಸಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಕೋಶಾಧಿಕಾರಿ ಮಾದವ ಚಾಂತಾಳ, ಜೆ‌.ಡಿ.ಎಸ್ ಮುಖಂಡ ಸೋಮಶೇಖರ್ ಕೂಜುಗೋಡು, ಮುಖಂಡರುಗಳಾದ ಮಣಿಕಂಠ ಕೊಳಗೆ, ವಿನೂಪ್ ಮಲ್ಲಾರ, ಗುಣವರ್ದನ ಕೆದಿಲ, ಬೆಳ್ಯಪ್ಪ ಗೌಡ ಖಂಡಿಗೆ, ಸತೀಶ್ ಕೊಮ್ಮೆಮನೆ, ಅನಂತ ಅಂಙಣ, ಸತ್ಯನಾರಾಯಣ ಬೆಂಡೋಡಿ, ಸುಜನ್ ನೆತ್ತಾರ, ಜೀವನ್ ಬಾಳುಗೋಡು, ಗಂಗಾಧರ ಮುಂಡೋಕಜೆ, ನಾರಾಯಣ ನವಗ್ರಾಮ ಮತ್ತಿತರರು ಉಪಸ್ಥಿತರಿದ್ದರು.

ಬ್ರಿಟಿಷರು ಮಾಡಿದ್ದನ್ನೇ ಮಾಡ್ತಾರೆ . ಈಗಲೂ ಮಾಡ್ತಾ ಇದ್ದಾರೆ, ಕಸ್ತೂರಿ ರಂಗನ್ ವರದಿ, ನಕ್ಸಲ್ ಹಾವಳಿ, ಅಡಿಕೆ ಹಳದಿ ರೋಗ ಬಗ್ಗೆ ಲೋಕಸಭಾ ಅಭ್ಯರ್ಥಿ ಗಳ ಅಜೆಂಡಾ ಇಲ್ಲ, ಈ ಬಗ್ಗೆ ಪ್ರಸ್ತಾಪವಿಲ್ಲ ಯಾಕೆ ಎಂದು ಮತದಾರರು ಪ್ರಶ್ನಿಸಿದರು.

ಸುದ್ದಿ ಬಿಡುಗಡೆ ಪತ್ರಿಕೆಯ ಮ್ಯಾನೇಜರ್ ಯಶ್ವಿತ್ ಕಾಳಮ್ಮನೆ, ವರದಿಗಾರರಾದ ಶಿವರಾಮ ಕಜೆಮೂಲೆ, ಸುದ್ದಿ ಚಾನೆಲ್ ನ ತಾಂತ್ರಿಕ ವಿಭಾಗದ ಮುಖ್ಯಸ್ಥ ಶ್ರೀಧಾಮ ಅಡ್ಕಾರು, ಸುದ್ದಿ ಪ್ರತಿನಿಧಿ ಕುಶಾಲಪ್ಪ ಕಾಂತುಕುಮೇರಿ ಸಹಕರಿಸಿದರು.