ಕುಕ್ಕಂದೂರು : ರಸ್ತೆ ಬದಿಯಲ್ಲಿ ಬೀಳುತ್ತಿದೆ ಕಸದ ರಾಶಿ

0

ತಮಿಳು ಕ್ವಾಟ್ರಸ್ ಬಳಿ ತಾಜ್ಯದ ದುರ್ವಾಸನೆ; ಗ್ರಾ.ಪಂ. ಅಸಹಾಯಕತೆ

ಸ್ವಚ್ಛ ಭಾರತ ವಾಗಬೇಕೆಂಬ ಪ್ರಧಾನಿಯವರ ಆಶಯಕ್ಕೆ
ಅಪವಾದವೆಂಬಂತೆ ಜಾಲ್ಸೂರು ಗ್ರಾಮದ ಕುಕ್ಕಂದೂರು ತಮಿಳು ಕ್ವಾಟ್ರಸ್ ಪಕ್ಕದಲ್ಲಿ ಹಾದುಹೋಗುವ ಸುಬ್ರಹ್ಮಣ್ಯ -ಜಾಲ್ಸೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಕಸದ ರಾಶಿ ತುಂಬಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇಲ್ಲಿರುವ ಕಣಿಯಲ್ಲಿ ಪ್ರತೀ ನಿತ್ಯ ಕಸದ ರಾಶಿ ಸಂಗ್ರಹವಾಗುತ್ತಿದ್ದು, ಕಸ ಅಲ್ಲಿಯೇ ಕೊಳೆತು ನಾರುತ್ತಿದೆ. ಪ್ಲಾಸ್ಟಿಕ್ ಚೀಲಗಳು, ಬಾಟಲ್ , ಮಕ್ಕಳು, ಮಹಿಳೆಯರು ಬಳಸುವ ಕೆಲವೊಂದು ಖಾಸಗಿ ವಸ್ತುಗಳನ್ನು ಜನರು ರಸ್ತೆ ಬದಿಯಲ್ಲೇ ಎಸೆದು ಹೋಗುವ ಮೂಲಕ ತಾಜ್ಯ ಉತ್ಪಾದನೆಗೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.

ಇಲ್ಲಿ ಮಾತ್ರವಲ್ಲದೆ ಪೈಚಾರು -ಸೋಣಂಗೇರಿಯ ರಸ್ತೆಯುದ್ದಕ್ಕೂ ಕಸಗಳ ರಾಶಿಯೇ ಕಾಣಸಿಗುತ್ತಿದೆ.

ಈ ಬಗ್ಗೆ ಅನೇಕ ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಈವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಹಾಗಾಗಿ ಪ್ರಧಾನಿಯವರ ಸ್ವಚ್ಛ ಭಾರತ ಕನಸು ಬರೇ ಕಾರ್ಯಕ್ರಮಗಳಿಗೆ ಮಾತ್ರ ಸೀಮತವಾಗಿದೆಯೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗಾಗಿ ಈ ಭಾಗದ ಪಂಚಾಯತ್ ಸದಸ್ಯರು ಕೂಡಲೇ ಪಂಚಾಯತ್ ಗಮನಕ್ಕೆ ತಂದು ಇದನ್ನು ತೆರವುಗೊಳಿಸಬೇಕು, ಕಸ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.