ರೋಟರಿ ವಿದ್ಯಾ ಸಂಸ್ಥೆಯಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಉಷಾ ಕೆ. ಯವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

0

ರೋಟರಿ ವಿದ್ಯಾ ಸಂಸ್ಥೆಯಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ , ಸೇವೆಯಿಂದ ನಿವೃತ್ತಿಗೊಂಡ ಹಿರಿಯ ಶಿಕ್ಷಕಿ ಶ್ರೀಮತಿ ಉಷಾ.ಕೆ ಯವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಎಪ್ರಿಲ್ 8 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಸುಳ್ಯದ ಅಧ್ಯಕ್ಷರಾದ ರೊ.ಆನಂದ ಖಂಡಿಗ ಶಿಕ್ಷಕಿ ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿ , ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ವಿದ್ಯಾಸಂಸ್ಥೆಯ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿಯಡ್ಕ, ಆಡಳಿತ ಮಂಡಳಿಯ ಸದಸ್ಯರಾದ ರೊ.ಸವಣೂರು ಸೀತಾರಾಮ ರೈ., ರೊ.ದಯಾನಂದ ಆಳ್ವ, ರೊ.ಪ್ರಭಾಕರ ನಾಯರ್, ರೊ.ಮಹಾಲಕ್ಷ್ಮೀ ಕೊರಂಬಡ್ಕ ಶುಭ ಹಾರೈಸಿದರು.

ಸಹ ಶಿಕ್ಷಕರಾದ ಶ್ರೀಹರಿ ಪೈಂದೋಡಿ, ಶ್ರೀಮತಿ ಜಯಶ್ರೀ ಕೆ. , ಶ್ರೀಮತಿ ಚಂದ್ರಕಲಾ ಡಿ. ಶ್ರೀಮತಿ ನಳಿನಾಕ್ಷಿ.ಕಲ್ಮಡ್ಕ ವಿದ್ಯಾರ್ಥಿಗಳಾದ ಪ್ರಣಮ್ಯ ಎನ್ ಆಳ್ವ, ಶೃಂಗಿ, ಪೃಥ್ವಿರಾಜ್, ಕ್ಷಿತೀಶ ರಾಮ, ಹಂಸಿಕಾ,ನಿಶ್ಲಿಕಾ, ವರ್ಷಿಣಿ, ನಿರೀಕ್ಷಾ ಸುಳಾಯ, ಯಶ್ವಿನೀ , ಯಶಸ್ವಿ ಎಸ್.ರೈ, ಹಿಮಾನಿ, ಶ್ರೀ ದುರ್ಗಾ, ಫಾತಿಮಾತ್ ಶೈಮಾ, ಯಶಸ್ವಿ ಕೆ.ಜಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.


ಬಳಿಕ ಆಡಳಿತ ಮಂಡಳಿ , ಪದವಿ ಪೂರ್ವ ಕಾಲೇಜು, ಪ್ರಾಥಮಿಕ ವಿಭಾಗ, ಶಾಲಾ ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಂದ , ಪ್ರೌಢಶಾಲಾ ಸಿಬ್ಬಂದಿ ವರ್ಗದವರಿಂದ ನಿವೃತ್ತ ಶಿಕ್ಷಕಿಯವರಿಗೆ ಸನ್ಮಾನ ಸಮಾರಂಭ ನಡೆಯಿತು.


ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಶ್ರೀಮತಿ ಉಷಾ ಮೇಡಂ ತಮ್ಮ ಮೂವತ್ತು ವರ್ಷಗಳ ಸುದೀರ್ಘ ಸೇವೆಯ ಅನುಭವ ಹಂಚಿಕೊಂಡು ಭಾವುಕರಾದರು.
ಪೂರ್ವ ಸಂಚಾಲಕರಾದ ರೊ.ಬಾಪು ಸಾಹೇಬ್, ನಿವೃತ್ತ ಶಿಕ್ಷಕಿಯ ಪತಿ ಸಹಕಾರಿ ಬ್ಯಾಂಕ್ ನ ನಿವೃತ್ತ ಕಾರ್ಯ ನಿರ್ವಹಣಾ ಅಧಿಕಾರಿ ವಾಸುದೇವ ಹಾಗೂ ಪುತ್ರಿಯರಾದ ಶ್ರೀಮತಿ ಪ್ರೇಕ್ಷಾ , ಹಾಗೂ ಪ್ರತ್ಯಕ್ಷ ಮೊಗ್ರ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ.ಕೆ.ಎಸ್. ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾರ್ಥಿನಿಯರಾದ ಕು.ಮನುಜ್ಞಾ, ಕು.ವಂದಿತಾ, ಕು.ಪೂರ್ವಿಕಾ, ಕು.ಗಾನವಿ, ಕು.ಪ್ರೇರಣಾ
ಗುರು ಸ್ತುತಿಗೈದರು.

ಕು. ಪ್ರಣಮ್ಯ. ಎನ್.ಆಳ್ವ ಹಾಗೂ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.