ಕೆವಿಜಿ ಪಾಲಿಟೆಕ್ನಿಕ್ : ಅಟೊಮೋಟಿವ್ ಉದ್ಯಮವನ್ನು ರೂಪಿಸುವ ಇತ್ತೀಚಿನ ಪ್ರವ್ರತ್ತಿಗಳ ಅನ್ವೇಷಣೆ ಕುರಿತು ಉಪನ್ಯಾಸ

0

ಸುಳ್ಯದ ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸಂಘದ ವತಿಯಿಂದ ಅಟೊಮೋಟಿವ್ ಉದ್ಯಮವನ್ನು ರೂಪಿಸುವ ಇತ್ತೀಚಿನ ಪ್ರವ್ರತ್ತಿಗಳ ಅನ್ವೇಷಣೆ ಕುರಿತು ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು .


ಕೆ.ವಿ.ಜಿ.ಕಾಲೇಜ್ ಆಫ್ ಇಂಜಿನಿಯರಿಂಗ್ ನ ಮೆಕ್ಯಾನಿಕಲ್ ವಿಭಾಗದ ಪ್ರಾದ್ಯಾಪಕ ಅಭಿಜ್ಞ ಬಿ.ಬಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.


ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ. ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿಭಾಗದ ಮುಖ್ಯಸ್ಥ ಯತೀಶ ಕೆ.ಎನ್. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ, ವಿದ್ಯಾರ್ಥಿ ಆಪ್ತ ಸಮಾಲೋಚಕ ರಂಗಸ್ವಾಮಿ ಹಾಗೂ ವಿದ್ಯಾರ್ಥಿ ಸಂಘದ ಸಲಹೆಗಾರ ಮೇಘರಾಜ್ ಉಪಸ್ಥಿತರಿದ್ದರು.


ಅನ್ವಿತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಿಶಾಂತ್ ವಂದಿಸಿದರು.