ದ್ವಿತೀಯ ಪಿಯುಸಿ ಫಲಿತಾಂಶ;ಲಿಪಿ ಎಸ್.ಸಿ.ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ಸಂಪಾಜೆ ಗ್ರಾಮದ ಬೈಲೆ ಸಂಕೇಶ ಚಂದ್ರಶೇಖರ ಎಸ್.ಕೆ. ಮತ್ತು ಇಂದಿರಾ ಚಂದ್ರಶೇಖರ ದಂಪತಿಯ ಪುತ್ರಿ ಮಂಗಳೂರು ಕೆಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಕು.ಲಿಪಿ ಎಸ್.ಸಿ.ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.


ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಲಿಪಿ ಶೇ.94.8 (569)ಅಂಕ ಪಡೆದಿದ್ದಾರೆ.


ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿಯೂ ಪಂಜ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿಯಾಗಿ ಶೇ.98.24 ಅಂಕ ಪಡೆದ ಸಾಧನೆ ಮಾಡಿದ್ದಾರೆ.