ನಾ ಕಾವೂಂಗಾ ನಾ ಕಾನೇದೂಂಗ ಎನ್ನುವ ಮೋದಿಯವರು ನುಡಿದಂತೆ ನಡೆಯುವವರಲ್ಲ ಎನ್ನುವುದಕ್ಕೆ ಎಲೆಕ್ರೋಲ್ ಬಾಂಡ್ ಸಾಕ್ಷಿ : ರಕ್ಷಣ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿ

0

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತಾನಾಡಿ ನಾ ಕಾವೂಂಗಾ ನಾ ಕಾನೇದೂಂಗ ಎಂದು ಹೇಳಿದವರು ಇಂದು ಎಲೆಕ್ರೋಲ್ ಬಾಂಡ್ ಮೂಲಕ ಭ್ರಷ್ಟಾಚಾರ ಮಾಡಿರುವುದು ಇವರು ನುಡಿದಂತೆ ನಡೆಯುವವರಲ್ಲ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ಸುಳ್ಯ ರಾಷ್ಟ್ರ ರಕ್ಷಣ ವೇದಿಕೆಯ ಗೌರವ ಸದಸ್ಯರಾದ ಕೆಪಿ ಜಾನಿ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಕಳೆದ ಐದು ವರ್ಷಗಳಲ್ಲಿ ಸುಮಾರು ೧೨೦೦ ಕಂಪನಿಗಳು ಮತ್ತು ವ್ಯಕ್ತಿಗಳು ೧೬೦೦೦ ಕೋಟಿ ಎಲೆಕ್ಟೋರಲ್ ಬಾಂಡ್ ಖರೀದಿ ಮಾಡಿವೆ. ಖರೀದಿಯಾದ ಬಾಂಡಗಳಲ್ಲಿ ಒಂದು ಕೋಟಿ ಮೌಲ್ಯದ ಬಾಂಡಿನ ಪ್ರಮಾಣ ಶೇ. 96.-ಬಾಂಡ್ ಖರೀದಿ ಮಾಡಿದ ಕಂಪನಿಗಳಲ್ಲಿ ಮೂಲಭೂತ ಸೌಕರ್ಯ.

ಗಣಿಗಾರಿಕೆ, ಔಷಧ ಕಂಪನಿಗಳೇ ಹೆಚ್ಚಾಗಿದ್ದು ಈ ಕಂಪನಿಗಳು ಕೇಂದ್ರ ಸರ್ಕಾರದ ಕೃಪಾ ಕಟಾಕ್ಷವಿಲ್ಲದೆ ಅಕ್ರಮ ಲಾಭವನ್ನು ಮಾಡಲಾಗುವುದಿಲ್ಲ ಎಂದು ಹೇಳಿದರು. ಅಲ್ಲದೇ ಸುಮಾರು ೪೦ಕ್ಕೂ ಹೆಚ್ಚು ಕಂಪನಿಗಳು ತಮ್ಮ ಆದಾಯದ 10-40 ಪಟ್ಟು ಹೆಚ್ಚು ದೇಣಿಗೆಯನ್ನು ನೀಡಿವೆ.

ಸುಮಾರು ೨೫ಕ್ಕೂ ಹೆಚ್ಚು ಕಂಪನಿಗಳು ತಮ್ಮ ಮೇಲೆ ಐಟಿ ಅಥವಾ ಇಡಿ ರೇಡ್ ಆದ ಒಂದು ವಾರದ ತಿಂಗಳಿನಲ್ಲಿ ಎಲೆಕ್ಟೋರಲ್ ಬಾಂಡ್ ಖರೀದಿ ಮಾಡಿವೆ. ಇವೆಲ್ಲವೂ ಕೇಂದ್ರ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಕಾಲಘಟ್ಟದಲ್ಲಿ ಅತಿ ಹೆಚ್ಚು ಶುಲ್ಕ ವಸೂಲಿ ಅಪರಾಧ ಮಾಡಿದ್ದ, ಅಸಮರ್ಪಕ ಕೋವಿಡ್ ಕಿಟ್ ಸರಬರಾಜು ಮಾಡಿದ್ದ, ಅತಿ ಹೆಚ್ಚು ದರಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡಿ ಕೋವಿಡ್ ಕಾಲದಲ್ಲೂ ಸಾವಿರಾರು ಕೋಟಿ ಲಾಭ ಮಾಡಿದ್ದ ಯಶೋದಾ ಹಾಸ್ಪಿಟಲ್ಸ್, ಹೆಟಿರೋ ಮೆಡಿಕಲಸ್, ಟೊರೆನ್ಸ್ ಮೆಡಿಕಲ್ಸ್, ಸಿರಮ್ ಇನ್ಸಿಟ್ಯುಟ್ ಆಫ್ ಇಂಡಿಯಾಗಳು ಇವೆಲ್ಲವೂ ಕೋವಿಡ್ ಕಾಲದಲ್ಲಿ ನೂರಾರು ಕೋಟಿ ಎಲೆಕ್ಟೋರಾಲ್ ಬಾಂಡ್ ಖರೀದಿ ಮಾಡಿದ ಕಂಪನಿಗಳಾಗಿವೆ ಎಂದು ಆರೋಪಿಸಿದರು. ಈವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅತಿ ಹೆಚ್ಚು ಎಲೆಕ್ಟೋರಲ್ ಬಾಂಡ್ – 1238 ಕೋಟಿ ರೂ.- ಖರೀದಿ ಮಾಡಿರುವುದು ಲಾಟರಿ ಕಿಂಗ್ ಸಾನ್ವಿಯಾಗೋ ಮಾರ್ಟಿನ್ ಮಾಲೀಕತ್ವದ ಪ್ಯೂಚರ್ ಗೇಮಿಂಗ್ ಕಂಪನಿ. ೧೯೮೮ ರಲ್ಲಿ ಈತ ಬರ್ಮಾದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೊಯಮತ್ತೂರು ನಿವಾಸಿ. ಆದರೆ ಡಿಎಂಕೆ, ಸಿಪಿಎಂ, ಕಾಂಗ್ರೆಸ್ ಮತ್ತು ಅಂತಿಮವಾಗಿ ಬಿಜೆಪಿಯ ಸಖ್ಯವನ್ನು ಪಡೆದುಕೊಂಡು ಬಹಳ ಬೇಗನೇ ಭಾರತದ ಲಾಟರಿ ಕಿಂಗ್ ಆಗಿ ಬೆಳದ. ಈತ ಸಿಕ್ಕಿಂ ಸರ್ಕಾರ ಒಂದಕ್ಕೆ ಹಾಕಿರುವ ಟೋಪಿಯ ಮೊತ್ತ ೪೦೦೦ ಕೋಟಿ. ಈತನ ಹೆಂಡತಿ ಮತ್ತು ಮಗ ಈಗ ಬಿಜೆಪಿಯ ನಾಯಕರುಗಳಾಗಿದ್ದಾರೆ. ಇವೆಲ್ಲಾ ಹೇಗೆ ಸಾಧ್ಯ ಆಯ್ತು ಎಂದು ಅವರು ಪ್ರಶ್ನಿಸಿದ್ದರು.


ಈ ಎಲೆಕ್ಟೋರಲ್ ಬಾಂಡ್ ಹಗರಣ ಭಾರತದ ಅತಿದೊಡ್ಡ ಭ್ರಷ್ಟಾಚಾರದ ಹಗರಣವಾಗಿದೆ. ಹಲವು ಸಾವಿರ ಕೋಟಿ ಪಕ್ಷ ದೇಣಿಗೆ ಪಡೆದುಕೊಂಡು ಪ್ರಧಾನವಾಗಿ ಮೋದಿ ಸರ್ಕಾರ ಲಕ್ಷಾಂತರ ಕೋಟಿ ಸ್ವತ್ತನ್ನು, ಕಾಂಟ್ರಾಕಟನ್ನು ದೇಣಿಗೆ ನೀಡಿದವರಿಗೆ ನೀಡಿದೆ. ಐಟಿ-ಇಡಿಗಳನ್ನು ಗೂಂಡಗಳಂತೆ ಬಳಸಿಕೊಂಡು ಬಾಂಡ್ ದರೋಡೆ ಮಾಡಿದ್ದು ಇಂದು ಪ್ರತಿಯೋರ್ವ ಭಾರತೀಯ ಪ್ರಜೆಗಳಿಗೆ ಗೊತ್ತಾಗಿರುವ ಸತ್ಯ ಸಂಗತಿಯಾಗಿವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಲಕ್ಷ್ನೀಶ್ ಗಬಲಡ್ಕ ಮಾತನಾಡಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಪಕ್ಷದ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಾಗಿರುವ ಕಾಪ್ಟನ್ ಬ್ರಿಜೇಶ್ ಚೌಟರವರು ಭ್ರಷ್ಟಾಚಾರದ ವಿರುದ್ಧ ಯಾವ ರೀತಿ ಹೋರಾಟ ಮಾಡುತ್ತಾರೆ ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ಬಗ್ಗೆ ಇವರ ನಿಲುವು ಏನು ? ಎಂಬುವುದನ್ನು ಇವರು ಮೊದಲು ಜನತೆಗೆ ಸ್ಪಷ್ಟನೆಯನ್ನು ನೀಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಗೌರವ ಸದಸ್ಯ ಕೆ.ಎಸ್ ಉಮ್ಮರ್ ಮತನಾಡಿ ಕೆಂದ್ರ ಸರ್ಕಾರವು ಇಡಿ ಐಡಿ ಎನ್‌ಐಎ ಮುಂತಾದ ತನಿಖಾ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ದೊಡ್ಡ ದೊಡ್ಡ ಕಂಪನಿಗಳಿಂದ ರೈಡ್ ಮಾಡಿಸಿ ಎರಡು ಮೂರು ದಿನಗಳಗೆ ಅವರಿಂದ ಪಡೆಯಬೇಕಾದ ಮೊತ್ತಗಳನ್ನು ಪಡೆದು ಅವರನ್ನು ನಿರ್ದೋಶಿ ಎಂದು ಘೋಷಿಸಿ ಭ್ರಷ್ಟಾಚಾರಿಗಳ ಪರವಾಗಿ ನಿಲ್ಲುವಂತರಾಗಿದ್ದಾರೆ.

ಇಂತಹವರನ್ನು ಯಾವುದೇ ಕಾರಣಕ್ಕೂ ಈ ಬಾರಿಯ ಚುನಾಚಣೆಯಲ್ಲಿ ನಮ್ಮ ದೇಶದ ಜನತೆ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವೇದಿಕೆ ಅಶ್ರಫ್ , ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಪೆಲ್ತಡ್ಕ, ಸದಸ್ಯರಾದ ಬಿಟ್ಟ ಬಿ ನೆಡುನಿಲಂ ಉಪಸ್ಥಿತರಿದ್ದರು.