ಸತೀಶ್ ಡಿ.ವಿ.ಯವರ ಮಂಗಳೂರಿನ ಅಭಿನವ್ ಎಂಟರ್ಪ್ರೈಸಸ್ ಗೆ ಸೌತ್ ಇಂಡಿಯಾ ಬೆಸ್ಟ್ ಫ್ರಾಂಚೈಸಿ ಅವಾರ್ಡ್

0

ಸುಳ್ಯದ ಗೂನಡ್ಕದ ಸತೀಶ್ ಡಿ.ವಿ.ಯವರು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಷ್ಠಿತ ಸೋನಿ ಸಂಸ್ಥೆಯ ಫ್ರಾಂಚೈಸಿ ಹೊಂದಿದ್ದು, ಮಂಗಳೂರಿನ ಅಭಿನವ್ ಎಂಟರ್ಪ್ರೈಸಸ್ ಗೆ ಸೌತ್ ಇಂಡಿಯಾ ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಲಭಿಸಿದೆ.


ಇತ್ತೀಚೆಗೆ ಗೋವಾದ ಲಲಿತ್ ಹೊಟೇಲ್ ನಲ್ಲಿ ನಡೆದ ಆಲ್ ಇಂಡಿಯಾ ಕಾನ್ಫರೆನ್ಸ್ ನಲ್ಲಿ ಸಂಸ್ಥೆಯ ಪಾಲುದಾರರಾದ ಸತೀಶ್ ಡಿ.ವಿ. ಮತ್ತು ಶ್ರೀಮತಿ ಪ್ರಶಾಂತಿ ಸತೀಶ್ ರಿಗೆ ಸೋನಿ ಇಂಡಿಯಾ ಕಂಪನಿಯ ಆಲ್ ಇಂಡಿಯಾ ಮುಖ್ಯಸ್ಥರಾದ ವಿಶಾಲ್ ಮಾತೂರ್, ಆಪರೇಷನಲ್ ಮುಖ್ಯಸ್ಥರಾದ ಸುರೇಂದರ್ ಸಮುರಿಯಾ, ರೀಜನಲ್ ಸರ್ವಿಸ್ ಮ್ಯಾನೇಜರ್ ಶ್ರೀನಿವಾಸನ್ ಮತ್ತು ಬ್ರಾಂಚ್ ಸರ್ವಿಸ್ ಇನ್ ಚಾರ್ಜ್ ಚಂದ್ರಶೇಖರ್ ಅವಾರ್ಡ್ ನೀಡಿ ಗೌರವಿಸಿದರು.


ಕಂಪನಿ ಸರ್ವಿಸ್, ಕಸ್ಟಮರ್ ಸರ್ವಿಸ್ ಬ್ರಾಂಡ್ ಲಾಯಲ್ಟಿ ಮತ್ತು ಸ್ಟಾಫ್ ಮೋಟಿವೇಶನ್ ಮತ್ತಿತರ ಮಾನದಂಡಗಳನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಗುತ್ತಿದ್ದು, 2024ನೇ ಸಾಲಿನಲ್ಲಿ ಮಂಗಳೂರಿನ ಅಭಿನವ್ ಎಂಟರ್ಪ್ರೈಸಸ್ ಈ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಕಳೆದ 15 ವರ್ಷಗಳಿಂದ ಸೋನಿ ಕಂಪನಿಯೊಂದಿಗೆ ಟೈಆಪ್ ಆಗಿರುವ ಶಿವಮೊಗ್ಗ ಮತ್ತು ಬೆಳಗಾಂನ ವಿಷ್ಣು ಸರ್ವಿಸ್ ಸೆಂಟರ್ ಗಳಿಗೂ ಸರ್ವಿಸ್ ಅವಾರ್ಡ್ ನೀಡಲಾಯಿತು.