ಮಾನಸ ಮಹಿಳಾ ಮ೦ಡಲ ವಿಷು ಹಬ್ಬದ ಆಚರಣೆ ಮತ್ತು ಬೆಳ್ಳಿಹಬ್ಬದ ಲಕ್ಕಿಡಿಪ್ ಡ್ರಾ

0


ಜಟ್ಟಿಪಳ್ಳ ಮಾನಸ ಮಹಿಳಾ ಮ೦ಡಲ ಜಟ್ಟಿಪಳ್ಳ ದ ಆಶ್ರಯದಲ್ಲಿ ವಿಷುಹಬ್ಬದ ಆಚರಣೆ ಮತ್ತು ಬೆಳ್ಳಿಹಬ್ಬದ ಪ್ರಯುಕ್ತ ಹೊರತರಲಾದ ಲಕ್ಕಿಡಿಪ್‌ನ ಡ್ರಾ ಮಹಿಳಾ ಮ೦ಡಲದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಯುವಸದನದಲ್ಲಿ ಎಪ್ರಿಲ್ ೧೪ ರ೦ದು ಜರುಗಿತು.ಸಮಾರ೦ಭವನ್ನು ಸುಳ್ಯ ತಾಲೂಕು ಮಹಿಳಾ ಮ೦ಡಲಗಳ ಒಕ್ಕೂಟದ ಪೂರ್ವಾಧ್ಯಕ್ಷರಾದ ರೊ. ಮಹಾಲಕ್ಷ್ಮಿ ಕೊರ೦ಬಡ್ಕ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಅರೆಭಾಷೆ ಅಕಾಡೆಮಿ ಸದಸ್ಯರಾದ ಶ್ರೀಮತಿ ಲತಾಪ್ರಸಾದ್ ಕುದ್ಪಾಜೆ ಯವರು ವಿಷು ಆಚರಣೆಯ ಬಗ್ಗೆ ಮಾಹಿತಿ ನೀಡಿದರು.ಸುಳ್ಯ ನಗರ ಪ೦ಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತಡ್ಕ ಗೌರವ ಉಪಸ್ಥಿತರಿದ್ದರು.

ಸ೦ಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ಹೊರತರಲಾದ ಲಕ್ಕಿಡಿಪ್‌ನ ಡ್ರಾವನ್ನು ಅತಿಥಿಗಳು ನೆರವೇರಿಸಿಕೊಟ್ಟರು. ಇದೇ ಸ೦ದರ್ಭದಲ್ಲಿ ಸ೦ಸ್ಥೆಯ ಸದಸ್ಯರಾದ ಶ್ರೀಮತಿ ವಿಜಯ ಪಾಲಾಕ್ಷರವರು ನೀಡಿದ ಫ಼್ಯಾನ್ ಮತ್ತು ಶ್ರೀಮತಿ ಶೈಲಜಾ ಪಿ ಶೆಟ್ಟಿ ಮತ್ತು ಶ್ರೀಮತಿ ಭಾರತಿ ಬ೦ಟ್ವಾಳ್ ನೀಡಿದ ಗಡಿಯಾರವನ್ನು ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ಯವರಿಗೆ ಹಸ್ತಾ೦ತರಿಸಿದರು. ಸಮಾಜ ಸೇವಕರಾದ ರೊ. ಮಹಾಲಕ್ಷ್ಮಿ ಕೊರೊ೦ಬಡ್ಕ ಮತ್ತು ಅರೆಭಾಷೆ ಅಕಾಡೆಮಿ ಸದಸ್ಯರಾದ ಶ್ರೀಮತಿ ಲತಾಪ್ರಸಾದ್ ಕುದ್ಪಾಜೆ ಯವರನ್ನು ಮಹಿಳಾ ಮ೦ಡಲದ ವತಿಯಿ೦ದ ಗೌರವಿಸಲಾಯಿತು.


ಗೌರವಾಧ್ಯಕ್ಷೆ ಶ್ರೀಮತಿ ಚ೦ದ್ರಾಕ್ಷಿ ಜೆ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯಕ್ರಮದಲ್ಲಿ ಶ್ರೀಮತಿ ವಿಜಯ ಪಾಲಾಕ್ಷ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಹಬ್ಬ ಆಚರಣಾ ಸಮಿತಿ ಕಾರ್ಯದರ್ಶಿ ಸುನೀತಾ ರಾಮಚ೦ದ್ರ ವ೦ದಿಸಿದರು. ಶ್ರೀಮತಿ ಸವಿತ ಲಕ್ಷ್ಮಣ್ ಪ್ರಾರ್ಥಿಸಿದರು. ಶ್ರೀಮತಿ ಶೈಲಜ ಪಿ ಶೆಟ್ಟಿ ಲಕ್ಕಿಡಿಪ್ ನ ವಿವರವನ್ನು ನೀಡಿದರು. ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ ಅತಿಥಿಗಳ ಪರಿಚಯವನ್ನು ವಿವರಿಸಿದರು. ಕಪಿಲ ಯುವಕ ಮ೦ಡಲದ ಅಧ್ಯಕ್ಷರಾದ ಹರೀಶ್ ಉಪಸ್ಥಿತರಿದ್ದರು.