ಬೆಳ್ಳಾರೆ: 108 ಆಂಬ್ಯುಲೆನ್ಸ್‌ ಗೆ ಪ್ರಶಾಂತ್ ರೈ ಮರುವಂಜ ದಂಪತಿಗಳಿಂದ ಟೈಯರ್ ಕೊಡುಗೆ

0

ಬೆಳ್ಳಾರೆ ಪ್ರಾ.ಆರೋಗ್ಯದಲ್ಲಿರುವ 108 ಆಂಬ್ಯುಲೆನ್ಸ್‌ ನ ಟಯರ್ ಸಂಪೂರ್ಣ ಸವೆದು ಹೋಗಿ ಅಪಾಯದ ಸ್ಥಿತಿಯಲ್ಲಿ ಸಂಚರಿಸುತ್ತಿದ್ದು, ಇದನ್ನು ಅರಿತ ಪ್ರಶಾಂತ್ ರೈ ಮರುವಂಜ ದಂಪತಿಗಳು ಟೈಯರ್ ನ್ನು ಕೊಡುಗೆಯಾಗಿ ನೀಡಿದರು.

ಟಯರ್‌ ಬದಲಾಯಿಸಲು ಕ್ರಮ ವಹಿಸಬೇಕಾದ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೇ ಇರುವುದನ್ನು ಮನಗಂಡು ಯುವ ಉದ್ಯಮಿ, ವಿಷ್ಣು ಗ್ರೂಪ್ಸ್ ಮಾಲಕ ಹಾಗೂ
ಹಾಗೂ ತುಳುನಾಡ ರಕ್ಷಣಾ ವೇದಿಕೆ ಸುಳ್ಯ ಇದರ ಅಧ್ಯಕ್ಷ ಪ್ರಶಾಂತ್ ರೈ ಮರುವಂಜ ಮತ್ತು ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀಮತಿ ಪ್ರವೀಣ ಪ್ರಶಾಂತ್ ರೈ ಮರುವಂಜರವರು ಟಯರನ್ನು ಕೊಡುಗೆಯಾಗಿ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.