ಏ. 19- 20 ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

0

ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಇದರ ವರ್ಷಾವಧಿ ಜಾತ್ರೋತ್ಸವ ಏ.19 ಮತ್ತು ಏ.20 ರಂದು ನಡೆಯಲಿದೆ.

ಆ ಪ್ರಯುಕ್ತ ಏ. 13 ಗೊನೆ ಕಡಿಯುವ ಮುಹೂರ್ತ ನಡೆದಿದೆ.
ಏ.19 ರಂದು ಬೆಳಗ್ಗೆ ಹಸಿರು ಕಾಣಿಕೆ ಸಮರ್ಪಣಾ ಪ್ರಾರಂಭ ಆಗುವುದು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾಯಂಕಾಲ ತಂತ್ರಿಗಳ ಆಗಮನದ ಬಳಿಕ ಪ್ರಸಾದ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ, ಪುಣ್ಯಾಹವಾಚನ ನಡೆದು ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಏ 20 ರಂದು
ಬೆಳಿಗ್ಗೆ ಮಹಾಗಣಪತಿ ಹ , ಮಹಾಪೂಜೆ ನಡೆದು ಗಂಟೆ 9.00ರಿಂದ ಶತರುದ್ರಾಭಿಷೇಕ ಪ್ರಾರಂಭವಾಗಲಿದೆ, ಪರಿವಾರ ದೇವರುಗಳಿಗೆ ಕಲಶಾಭಿಷೇಕ, ತಂಬಿಲಸೇವೆ ನಡೆದು
ಮಧ್ಯಾಹ್ನ ಗಂಟೆ 11.30ಕ್ಕೆ ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ ನಡೆದು
ಮಧ್ಯಾಹ್ನ ಪರಿವಾರ ದೈವಗಳ ಸಾನಿಧ್ಯದ ಕುರಿತು ಸಾಮೂಹಿಕ ಪ್ರಾರ್ಥನೆ ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ದೀಪಾರಾಧನೆ, ತಾಯಂಬಕ ರಂಗಪೂಜೆ ಬಳಿಕ ರಾತ್ರಿ ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮಂತ್ರಾಕ್ಷತೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.