ರಾಮನವಮಿ ಪ್ರಯುಕ್ತ ಸುಬ್ರಹ್ಮಣ್ಯ ದ ಮಠದಲ್ಲಿ ರಾಮಗಾನೋತ್ಸವ

0

ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ರಾಮನವಮಿ ಅಂಗವಾಗಿ ಏ.17 ರಂದು ರಾಮಗಾನೋತ್ಸವ ನೆರವೇರಿತು.

ಕಲಾವಿದ ಕೆ.ಯಜ್ಞೇಶ್ ಆಚಾರ್ ಮತ್ತು ಬಳಗದಿಂದ ಶ್ರೀ ಮಠದಲ್ಲಿ ರಾಮಗಾನೋತ್ಸವವು ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾಯಿತು. ಶ್ರೀ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸುಮಾರು ೧.೩೦ ಗಂಟೆಗಳ ಕಾಲ ರಾಮಗಾನ ನೆರವೇರಿತು.


ಸುಮಾರು ಒಂದೂವರೆ ತಾಸು ಶ್ರೀರಾಮನ ಕೀರ್ತನೆಗಳನ್ನು ಗಾಯಕ ಯಜ್ಞೇಶ್ ಆಚಾರ್ ಹಾಡಿದರು.ಇವರಿಗೆ ಹಿಮ್ಮೇಳದಲ್ಲಿ ರವಿರಾಜ್ ಒಡಿಯೂರ್(ಹಾರ್ಮೋನಿಯಂ), ಸುಹಾಸ್ ಹೆಬ್ಬಾರ್(ರಿದಂ ಪ್ಯಾಡ್), ಸುಮನ್ ದೇವಾಡಿಗ(ತಬಲ)ದಲ್ಲಿ ಸಹಕರಿಸಿದರು.ಈ ಸಂದರ್ಭ ಶ್ರೀ ಮಠದ ದಿವಾನ ಸುದರ್ಶನ ಜೋಯೀಸ, ಪ್ರಮುಖರಾದ ಸರ್ವೇಶವರ ಭಟ್, ಡಾ.ಕೆ.ಎಸ್.ಎನ್.ಉಡುಪ ಸೇರಿದಂತೆ ಕಲಾಸಕ್ತರು ಮತ್ತು ಭಕ್ತರು ಉಪಸ್ಥಿತರಿದ್ದರು.

ಶ್ರೀ ಮಠದಲ್ಲಿ ನಡೆದ ರಾಮನವಮಿ ಉತ್ಸವದ ಅಂಗವಾಗಿ ವಿಶೇಷವಾದ ಪ್ರಾಕೃತಿಕ ಮಂಟಪವನ್ನು ಸಿದ್ಧಪಡಿಸಲಾಗಿತ್ತು.ಸಂಪೂರ್ಣ ಹಸಿರುಮಯವಾಗಿ ಶ್ರೀರಾಮ ಮಂಟಪವು ಕಂಗೊಳಿಸಲಾಗಿತ್ತು.