ಎರಡೂ ಕಾರುಗಳ ನಡುವೆ ಡಿಕ್ಕಿ, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

0


ಸುಳ್ಯದ ಶ್ರೀರಾಂಪೇಟೆ ಬಳಿ ನಡೆದ ಘಟನೆ



ಸುಳ್ಯ ಶ್ರೀರಾಮ್ ಪೇಟೆ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡ ಘಟನೆ ಏಪ್ರಿಲ್ ೨೦ರಂದು ನಡೆದಿದೆ.
ಓಮ್ನಿ ಕಾರು ಹಾಗೂ ಸೆಲಾರಿಯೋ ಕಾರಿನ ನಡುವೆ ಶ್ರೀರಾಮ್ ಪೇಟೆ ಪೋಸ್ಟ್ ಆಫೀಸ್ ಕಚೇರಿಯ ಬಳಿ ಡಿಕ್ಕಿ ಸಂಭವಿಸಿ ಘಟನೆಯಿಂದಾಗಿ ಎರಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ.ಕಾರುಗಳ ಡಿಕ್ಕಿಯಿಂದ ಸುಳ್ಯ ಮುಖ್ಯ ಬೀದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಇತರ ವಾಹನ ಸವಾರರು ಕೆಲ ಸಮಯ ಕಿರಿಕಿರಿ ಅನುಭವಿಸುವಂತಾಯಿತು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.