ಪಂಜ: ನೀರು ಪಾಲಾಗುತ್ತಿದ್ದ ನಾಯಿ ಮರಿಗಳನ್ನು ರಕ್ಷಣೆ

0

ಮಾನವಿಯತೆ ಮೆರೆದ ಸಂಗೋಪನಾ ಇಲಾಖೆಯ ಪೆರವೆಟ್ ವಿ.ಎ.

ನೀರು ಪಾಲಾಗುತ್ತಿದ್ದ ನಾಯಿ ಮರಿಗಳನ್ನು ಪೆರವೆಟ್ ವಿ.ಎ. ಒಬ್ಬರು ರಕ್ಷಿಸಿದ ಘಟನೆ 19ರಂದು ಪಂಜದಿಂದ ವರದಿಯಾಗಿದೆ.

ಏ.19 ರಂದು ಸುರಿದ ಮಳೆಗೆ ಪಂಜ ಪೇಟೆಯಲ್ಲಿ ಮೋರಿಯೊಳಗೆ ಇದ್ದ ಬೀದಿ ನಾಯಿಯ ಮರಿಗಳು ನೀರಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ವಿಷಯ ತಿಳಿದ ಪಶು ಸಂಗೋಪನಾ ಇಲಾಖೆಯಲ್ಲಿ ಪೆರವೆಟ್ ವಿ.ಎ ಶ್ರೀವತ್ಸ ಪುತ್ಯರವರು ಮೋರಿ ಯೊಳಗೆ ನುಗ್ಗಿ ನೀರಿನಲ್ಲಿ ಸಿಲುಕಿದ್ದ ನಾಯಿ ಮರಿಗಳನ್ನು ರಕ್ಷಿಸಿ ಮಾನವಿಯತೆ ಯಿಂದ ಮೆರೆದು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಪಂಜದಲ್ಲಿ ಅನೇಕ ಬೀದಿ ನಾಯಿಗಳಿಗೆ ಹುಚ್ಚು ನಾಯಿ ನಿರೋಧಕ ಲಸಿಕೆ
ಹಾಕಿ ಪರಿಸರ ಕಾಳಜಿ ವಹಿಸಿದ್ದಾರೆ.