ಪಂಬೆತ್ತಾಡಿ ತರವಾಡು ಕುಟುಂಬದ ಧರ್ಮ ದೈವ ಮತ್ತು ಸಹಪರಿವಾರ ದೈವಗಳ ನೇಮೋತ್ಸವ

0

ಪಂಬೆತ್ತಾಡಿ ತರವಾಡು ಕುಟುಂಬದ ಶ್ರೀ ಧರ್ಮ ದೈವ ಮತ್ತು ಸಹಪರಿವಾರ ದೈವಗಳ ನೇಮೋತ್ಸವ ಏ.20 ರಿಂದ ಏ.21 ತನಕ ಪಂಬೆತ್ತಾಡಿ ತರವಾಡು ಮನೆಯಲ್ಲಿ ಜರುಗಿತು.

ಏ.20.ರಂದು ಸಂಜೆ ದೈವದ ಭಂಡಾರ ತೆಗೆಯುವುದು, ರಾತ್ರಿ ಕಲ್ಲುರ್ಟಿ ದೈವಗಳ ನೇಮ, ಅನ್ನಸಂತರ್ಪಣೆ, ಕುಪ್ಪೆ ಪಂಜುರ್ಲಿ ನೇಮ, ವರ್ಣಾರ ಪಂಜುರ್ಲಿ ನೇಮ ಜರುಗಿತು.

ಏ.21 ರಂದು ಮುಂಜಾನೆ ಧರ್ಮದೈವ ರುದ್ರ ಚಾಮುಂಡಿ ನೇಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಗುಳಿಗ ದೈವದ ನೇಮ, ಅಂಗಾರ ಬಾಕುಡ ನೇಮ ಜರುಗಿತು