ಬೆನ್ನು ಹುರಿ ಏಟಾಗಿ ಆಸ್ಪತ್ರೆ ಸೇರಿದ ಅಂಗನವಾಡಿ ಶಿಕ್ಷಕಿ

0

ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ಕುಟುಂಬ

ಸಹೃದಯರು ಹಣ ಹೊಂದಿಸಿ ಕೊಡುವಂತೆ ಮನವಿ

ಕಲ್ಮಕಾರು ಗ್ರಾಮದ ಅಂಗನವಾಡಿಯ ಶಿಕ್ಷಕಿ ನೇತ್ರಾವತಿ ಎಂಬವರು ಸೌದೆ ತರಲೆಂದು ಹೋದವರ ಬೆನ್ನು ಮೇಲೆ ಮರ ಬಿದ್ದು ಬೆನ್ನು ಹುರಿಗೆ ಬಲವಾದ ಪೆಟ್ಟು ಬಿದ್ದು ತೀವ್ರ ಸ್ವರೂಪದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಣ ಹೊಂದಿಸಲಾಗದೆ ಶಿಕ್ಷಕಿಯ ಕುಟುಂಬಕ್ಕೆ ಅತಂತ್ರ ಪರಿಸ್ಥಿತಿ ಬಂದೊದಗಿದೆ.

ಕಲ್ಮಕಾರಿನ ಅಂಗನವಾಡಿ ಯ ಶಿಕ್ಷಕಿ ನೇತ್ರಾವತಿ ಎಂಬವರು ತಮ್ಮ ಮನೆ ಗಡಿಕಲ್ಲಿನ ಹತ್ತಿರದ ಗುಡ್ಡಕ್ಕೆ ಕಟ್ಟಿಗೆಗಾಗಿ ತನ್ನ ಗಂಡನೊಂದಿಗೆ ತೆರಳಿದ್ದರು.

ಅಲ್ಲಿ ಕಟ್ಟಿಗೆ ಮಾಡುತ್ತಿರುವಾಗ ಒಣಗಿದ ಮರದ ಕೊಂಬೆಯೊಂದು ಮೈ ಮೇಲೆಬಿದ್ದು
ಕುತ್ತಿಗೆಯಿಂದ ಸ್ವಲ್ಪ ಕೆಳಭಾಗದ ಸ್ಪೈನಲ್ ಕಾರ್ಡ್ ಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಅವರ ಬೆನ್ನು ಹುರಿ ತೀವ್ರ ಜಖಂಗೊಂಡಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಒಂದು ಲಕ್ಷದ ನಲ್ವತ್ತು ಸಾವಿರದ ಬಿಲ್ ಆಗಿದ್ದು ಈ ಹಣವನ್ನು ಹೊಂದಿಸಲಾಗದೆ ಕುಟುಂಬ ಕಣ್ಣೀರಿಡುತ್ತಿದೆ. ಇನ್ನು ಅಪರೇಷನ್ ಗೆ ಲಕ್ಷಗಳೇ ಬೇಕಾಗಿದೆ. ನೇತ್ರಾವತಿ ಅವರು ಕುತ್ತಿಗೆಯಿಂದ ಕೆಲ ಭಾಗದ ಸ್ಪರ್ಶ ಜ್ಞಾನ ಕಳೆದುಕೊಂಡಿದ್ದಾರೆ. ಕುತ್ತಿಗೆಯಿಂದ ಮೇಲ್ಬಾಗ ಸರಿಯಾಗಿ ಸ್ಪಂದನೆ ಇದೆ. ನೇತ್ರಾವತಿ ಅವರನ್ನು ಕೆ.ಎಂ.ಸಿ ಯಿಂದ ಎ.ಜೆ ಆಸ್ಪತ್ರೆಗೆ ಶಿಪ್ಟ್ ಮಾಡಗಿದ್ದು
ಈಗಾಗಲೇ ಕೆ.ಎಂ.ಸಿ ಆಗಿರುವ ಬಿಲ್ ಕಾಡಿಬೇಡಿ ಹೊಂದಿಸಲಾಗುತ್ತಿದೆ . ನೇತ್ರಾವತಿ ಅವರ ಗಂಡ ಮೂರು ವರ್ಷಗಳ ಹಿಂದೆ ಪಾರ್ಶ್ವ ವಾಯುಗೆ ತುತ್ತಾಗಿ ಅವರು ಸಮಸ್ಯೆಯಿಂದಲೇ ಜೀವನ ದೂಡುತಿದ್ದಾರೆ .
ಪುಟಾಣಿ ಮಕ್ಕಳಿಗೆ ಪಾಠ ಹೇಳ ಬೇಕಾದ ಶಿಕ್ಷಕಿಗೆ ಈ ಪರಿಸ್ಥಿತಿ ಬಂದು ಕುಟುಂಬ ಕಣ್ಣೀರಿಡುವಂತೆ ಮಾಡಿದೆ. ಸಾರ್ವಜನಿಕರು ತಮ್ಮ ಕೈಯಿಂದಾಗುವಷ್ಟು ಸಹಾಯಧನ ನೀಡಿ ಶಿಕ್ಷಕಿಯ ಆರೋಗ್ಯ ಚೇತರಿಕೆಯಲ್ಲಿ ಸಹಕಾರಿಯಾಗ ಬೇಕಾಗಿ ಕೇಳಿಕೊಳ್ಳಲಾಗಿದೆ. ಕೆಳಗೆ ನೀಡಲಾಗಿರುವ ಅಕೌಂಟ್ ಹಣ ಹಾಕ ಬೇಕಾಗಿ ಕೋರಲಾಗಿದೆ.

Name – Nethravathi

A/c – 01392200028117

IFSC code – CNRB0002483

BANK – CANARA Bank

9480986252 (ಪೋನ್ ಪೇ)