ನೋಟಾ ಅಭಿಯಾನಕ್ಕೆ ಬೆಂಬಲ ಕೋರಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ‘ಓಟ್ ಫಾರ್ ನೋಟಾ’ ಜಾಥಾ

0

ಲೋಕಸಭಾ ಚುನಾವಣೆಯಲ್ಲಿ ಸೌಜನ್ಯ ಪರವಾಗಿ ಹೋರಾಟಗಾರರು ಆರಂಭಿಸಿರುವ ನೋಟಾ ಅಭಿಯಾನಕ್ಕೆ ಬೆಂಬಲ ಕೋರಿ ವಾಹನ ಜಾಥಾವು ನಿಂತಿಕಲ್ಲಿನಿಂದ ಆರಂಭಗೊಂಡಿದ್ದು, ಸುಳ್ಯದ ತನಕ ನಡೆಯಲಿದೆ.


ನೂರಾರು ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳ ಮೂಲಕ ಜಾಥಾ ಆರಂಭಗೊಂಡಿದ್ದು, ಓಟ್ ಫಾರ್ ನೋಟಾ ಎಂಬ ಘೋಷಣೆ ಮೊಳಗುತ್ತಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ,., ಎನ್.ಟಿ. ವಸಂತ ಮೊದಲಾದವರು ಜಾಥಾದ ನೇತೃತ್ವ ವಹಿಸಿದ್ದರು.