ಆಲೆಟ್ಟಿಯ ಹಲವು ಕಡೆಗಳಲ್ಲಿ ಗಾಳಿಗೆ ಅಪಾರ ಹಾನಿ- ಸ್ಥಳಕ್ಕೆ ಗ್ರಾಮದ ಆಡಳಿತಾಧಿಕಾರಿ ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

0

ಆಲೆಟ್ಟಿ ಗ್ರಾಮದ ತಲೆಪಳ, ಮೈಂದೂರು, ಕಟ್ಟೆಕ್ಕಳ ಮುಂತಾದ ಕಡೆಗಳಲ್ಲಿ ನಿನ್ನೆ ಸಂಜೆ ಬೀಸಿದ ವ್ಯಾಪಕ ಗಾಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ತಲೆಪಳ ಎಂಬಲ್ಲಿ ಅಂದಾಜು ಸುಮಾರು 70 ಕ್ಕಿಂತಲೂ ಹೆಚ್ಚು ಮರಗಳು ಬಿದ್ದಿವೆ. ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದು ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಆಲೆಟ್ಟಿ ಗ್ರಾಮ ಆಡಳಿತಾಧಿಕಾರಿ ಶರತ್ ಹಾಗೂ ಪಂಚಾಯತ್ ಪಿ.ಡಿ.ಒ ಸೃಜನ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.