ಶಂಕಿತ ಡೆಂಗ್ಯೂನಿಂದ ಕಾರ್ಯತಡ್ಕ ಶಿಕ್ಷಕಿ ಜಯ ಕೆ. ನಿಧನ

0

ಮುರುಳ್ಯ ಗ್ರಾಮದ ಕಾರ್ಯತಡ್ಕ ದಿ.ತಿಮ್ಮಪ್ಪರವರ ಪುತ್ರಿ ಶಿಕ್ಷಕಿ ಕು. ಜಯ ಕೆ.ಯವರು ಎ.24 ರಂದು ಶಂಕಿತ ಡೆಂಗ್ಯೂ ಜ್ವರದಿಂದ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಏಳೆಂಟು ದಿನಗಳ ಹಿಂದೆ ಅಸೌಖ್ಯವೆಂದು ಕಾಣೆಯೂರು ಆಸ್ಪತ್ರೆ ,ಪುತ್ತೂರಿನ ಧನ್ವಂತರಿ ಬಳಿಕ ಪಂಜಿಗಾರು ಆಸ್ಪತ್ರೆ, ಬಳಿಕ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ, ಕಡೆಗೆ ಸುಳ್ಯದ ಕೆವಿಜಿ ಆಸ್ಪತ್ರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ ದಾಖಲುಗೊಂಡಿದ್ದರು. ಅಲ್ಲಿ ಅವರು ಚಿಕಿತ್ಸೆ ಸ್ಪಂದಿಸದೆ ನಿಧನರಾದರು.

ಮೃತರು ಅತಿಥಿ ಶಿಕ್ಷಕಿಯಾಗಿ ಶಾಂತಿನಗರ ಸರಕಾರಿ ಶಾಲೆ, ಮುರುಳ್ಯ ಶಾಲೆ, ಕಾರ್ಯತಡ್ಕ ಶಾಲೆ, ಕರಂಬಿಲ ಶಾಲೆಯಲ್ಲಿ ಉತ್ತಮ ಶಿಕ್ಷಕಿಯಾಗಿ ದುಡಿದಿದ್ದರು. ಜನಾನುರಾಗಿದ್ದ ಇವರು ತಂದೆ ನಿಧನ ಬಳಿಕ, ಮನೆಯ ಆಧಾರ ಸ್ಥಂಭವಾಗಿದ್ದರು. ಅವರಿಗೆ ೨೮ ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಪೂವರೋ, ಸಹೋದರ ಕುಶಾಲಪ್ಪ, ಸಹೋದರಿಯರಾದ ವನಜ, ವಾರಿಜ ಕುಟುಂಬಸ್ಥರನ್ನು ಅಗಲಿದ್ದಾರೆ.