ಗುತ್ತಿಗಾರಿನಲ್ಲಿ ಬಿಜೆಪಿ ರೋಡ್ ಶೋ : ಕ್ಯಾ.ಬ್ರಿಜೇಶ್ ಚೌಟ ಪರ ಮತಯಾಚನೆ

0

ಲೋಕಸಭಾ ಚುನಾವಣೆಯ ಪ್ರಯುಕ್ತ ಬಿಜೆಪಿ ವತಿಯಿಂದ ಗುತ್ತಿಗಾರಿನಲ್ಲಿ ರೋಡ್ ಶೋ‌ ಮೂಲಕ ಬಿಜೆಪಿ‌ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಏ.24 ರಂದು ಮತಯಾಚನೆ ನಡೆಸಲಾಯಿತು.

ಗುತ್ತಿಗಾರು ಮುಖ್ಯ ರಸ್ತೆಯ ಪೇಟೆಯಲ್ಲಿ ಸಾಗಿ ಮತ ಯಾಚನೆ ಮಾಡಲಾಯಿತು.

ಬಿಜೆಪಿಯ ಮುಖಂಡರುಗಲಾದ ವೆಂಕಟ್ ದಂಬೆಕೋಡಿ, ಎ.ವಿ ತೀರ್ಥರಾಮ, ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಮೊಗ್ರ, ಕಿಶೋರ್ ಕುಮಾರ್ ಅಂಬೆಕಲ್ಲು, ಸುಮಿತ್ರಾ ಮೂಕಮಲೆ, ವಿಜಯ ಚಾರ್ಮತ, ಶ್ರೀಕಾಂತ್ ಮಾವಿನಕಟ್ಟೆ, ಹರಿಶ್ಚಂದ್ರ ಕೇಪ್ಲಕಜೆ, ಸಚಿನ್ ಮೊಟ್ಟೆಮನೆ ಮತ್ತಿತರರು ಉಪಸ್ಥಿತರಿದ್ದರು.