ಜಾಲ್ಸೂರು: ಬೊಳುಬೈಲಿನಲ್ಲಿ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ವತಿಯಿಂದ ಮತಗಟ್ಟೆ ಶೃಂಗಾರ ಕಾರ್ಯ

0

ಚುನಾವಣಾ ಪರ್ವ ದೇಶದ ಗರ್ವ ಅಭಿಯಾನದಡಿ ವಿನೂತನ ಕಾರ್ಯಕ್ರಮ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಸ್ಥೆಯ ವತಿಯಿಂದ ದೇಶದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಪರ್ವ ದೇಶದ ಗರ್ವ ಅಭಿಯಾನದಡಿಯಲ್ಲಿ ಸುಳ್ಯ ತಾಲೂಕು ಪಂಚಾಯತಿ ನಿರ್ದೇಶನದಲ್ಲಿ ಜಾಲ್ಸೂರು ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಲ್ಸೂರಿನ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ವತಿಯಿಂದ ಬೊಳುಬೈಲು ಸ.ಕಿ.ಪ್ರಾ.ಶಾಲೆಯ ಮತಗಟ್ಟೆ ಶೃಂಗಾರ ಕಾರ್ಯವು ಎ.25ರಂದು ನಡೆಯಿತು.

ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಮತಗಟ್ಟೆಗಳಿರುವ ಕದಿಕಡ್ಕ ಸ.ಹಿ.ಪ್ರಾ.ಶಾಲೆ, ಜಾಲ್ಸೂರು (ಅಡ್ಕಾರು) ಸ.ಹಿ.ಪ್ರಾ.ಶಾಲೆ, ಬೊಳುಬೈಲು ಸ.ಕಿ.ಪ್ರಾ.ಶಾಲೆ ಹಾಗೂ ಸೋಣಂಗೇರಿ ಸ.ಹಿ.ಪ್ರಾ.ಶಾಲೆಯಲ್ಲಿ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ತೆರಳಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮತಗಟ್ಟೆಯಲ್ಲಿ ಬಾಳೆ ಕಟ್ಟೆ, ತಳಿರು ತೋರಣಗಳಿಂದ ಶೃಂಗರಿಸಿ, ರಂಗೋಲಿ ಹಾಕುವ ಮೂಲಕ ವಿನೂತನ ರೀತಿಯಲ್ಲಿ ಮತಗಟ್ಟೆಗಳನ್ನು ಶೃಂಗಾರ ಮಾಡಿದ್ದು, ಮತಗಟ್ಟೆಗೆ ಮತಹಾಕಲು ಬರುವ ಮತದಾರರಿಗೆ ಇದು ಸ್ಫೂರ್ತಿ ನೀಡಲಿದೆ.

ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ ನೆಕ್ರಾಜೆ, ಎಂ.ಬಿ.ಕೆ. ಶ್ರೀಮತಿ ಸೌಮ್ಯ ಕದಿಕಡ್ಕ, ಎಲ್‌.ಸಿ.ಆರ್.ಪಿ.ಗಳಾದ ಶ್ರೀಮತಿ ಸವಿತ ಪೆರುಮುಂಡ, ಚಂದ್ರಕಲಾ ಅಡ್ಕಾರು, ಜಾಲ್ಸೂರು ಗ್ರಾಮದ ಕೃಷಿಸಖಿ ವಿಜಯ ಕಾಳಮನೆ, ಪಶುಸಖಿ ರಶ್ಮಿ ಕಾಳಮ್ಮನೆ, ಸಂಘದ ಸದಸ್ಯೆ ಶ್ರೀಮತಿ ವಾಣಿ ವಿಶ್ವನಾಥ ಕಾಟೂರು, ಬಿ.ಎಲ್.ಒ. ಶ್ರೀಮತಿ ಬೇಬಿ ವಿಶ್ವನಾಥ ಕೋನಡ್ಕಪದವು, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಲಸುಬ್ರಹ್ಮಣ್ಯ ಬೈತಡ್ಕ, ನವಚೇತನ ಯುವಕ ಮಂಡಲದ ಗಣೇಶ್ ಕಾಟೂರು, ಪದ್ಮನಾಭ ನೆಕ್ರಾಜೆ, ಸುದೀರ್ ನೆಕ್ರಾಜೆ, ಗಂಗಾಧರ ಕಾಳಮನೆ, ಪ್ರತಾಪ್ ಶೆಟ್ಟಿ, ಅಂಗನವಾಡಿ ಸಹಾಯಕಿ ಗಿರಿಜ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.