ಎ.26ರಂದು ಲೋಕಸಭಾ ಚುನಾವಣೆ : ಎನ್.ಎಂ.ಸಿ.ಯಲ್ಲಿ‌ ಮಸ್ಟರಿಂಗ್ ಪ್ರಕ್ರಿಯೆ

0

ಚುನಾವಣಾ ಬೂತುಗಳಿಗೆ ತೆರಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು

ಎ.26ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ 233 ಬೂತ್ ಗಳಿಗೆ ಚುನಾವಣಾ ಕರ್ತವ್ಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರಳಿದ್ದಾರೆ.

ಇಂದು‌ ಬೆಳಗ್ಗೆ ಸುಳ್ಯ ಎನ್ ಎಂ ಸಿ ಕಾಲೇಜಿನಲ್ಲಿ ರಿಪೂರ್ಟ್ ಮಾಡಿಕೊಂಡು ಚುನಾವಣಾ ಸಿಬ್ಬಂದಿಗಳು ಬಳಿಕ ಮತ ಪೆಟ್ಟಿಗೆಯೊಂದಿಗೆ ತಮಗೆ ನಿಗದಿ ಪಡಿಸಿದ ಬೂತ್ ಗಳಿಗೆ ತೆರಳಿದರು.

ಶಾಂತಿಯುತವಾಗಿ ನಡೆಯಲು ಚುನಾವಣೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸಿ ಆರ್ ಪಿ ಎಫ್ ನ 100 ಸಿಬ್ಬಂದಿಗಳು ಪೊಲೀಸ್ ಇಲಾಖೆಯಿಂದ 426 ಮಂದಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಧಾರವಾಡ ಭಾಗದ ಓರ್ವ ಡಿವೈಎಸ್ಪಿ ಮೂರು ಪೊಲೀಸ್ ವೃತ ನಿರೀಕ್ಷಕರು,13 ಉಪ ನಿರೀಕ್ಷಕರುಗಳು ಒಳಗೊಂಡಿರುವ ಕಾವಲು ಪಡೆ ಈಗಾಗಲೇ ಸಿದ್ಧಗೊಂಡಿದೆ.ಇವರಲ್ಲಿ 82 ಮಂದಿ ಕೋಸ್ಟಲ್ ವಿಭಾಗದವರು, 145 ಮಂದಿ ಗ್ರಹರಕ್ಷಕ ದಳದ ಸಿಬ್ಬಂದಿಗಳು, ಉಳಿದಂತೆ ಬಳ್ಳಾರಿ ಸುಬ್ರಹ್ಮಣ್ಯ ಸುಳ್ಯ ಸೇರಿದ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸೇರಿರುತ್ತಾರೆ.
9 ಕೊಠಡಿಗಳಲ್ಲಿ ಸೆಕ್ಟರ್ ಅಧಿಕಾರಿಗಳು ತಮ್ಮ ತಮ್ಮ ಅದೀನದಲ್ಲಿ ಬರುವ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ಮಾಹಿತಿ ಹಾಗೂ ತರಬೇತಿ ನೀಡುವ ಕಾರ್ಯಕ್ರಮಗಳು ನಡೆಯುತ್ತಿದೆ.
ಪರಿಸರ ಸ್ವಚ್ಛತೆ ಮತ್ತು ಸಾಮಾಗ್ರಿಗಳ ಜೋಡಣೆ ಮುಂತಾದ ಕೆಲಸ ಕಾರ್ಯಗಳಲ್ಲಿ ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಿ ಎಂ ಡಾಂಗೆ ಅವರ ನೇತೃತ್ವದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ.
ಸುಮಾರು ಒಂದುವರೆ ಸಾವಿರ ಮಂದಿಗೆ ಊಟ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಬೆಳಗ್ಗಿನ ಪದಾರ್ಥದಲ್ಲಿ ಶಿರಾ ಉಪ್ಪಿಟ್ಟು ಅವಲಕ್ಕಿ ಚಾ ಹಾಗೂ ಕಾಫಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ಅನ್ನ ಸಾಂಬಾರು, ತರಕಾರಿ ಗಸಿ, ಉಪ್ಪಿನಕಾಯಿ, ಪಾಯಸ, ಮೊಸರು ನೀಡಲಾಗುತ್ತಿದೆ. ಊಟದ ವ್ಯವಸ್ಥೆಗೆ ಸುಮಾರು 6 ಕೌಂಟರ್ ಗಳನ್ನು ನಿರ್ಮಿಸಲಾಗಿದ್ದು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.


ಮಧ್ಯಾಹ್ನದ ಊಟದ ಬಳಿಕ ಎರಡು ಗಂಟೆಯಿಂದ ಮತದಾನ ಕೇಂದ್ರಕ್ಕೆ ಸಿಬ್ಬಂದಿಗಳು ತೆರಳಲಿದ್ದು ಅವರಿಗಾಗಿ ನೂರಾರು ವಾಹನಗಳು ಸಿದ್ದಗೊಂಡಿವೆ.