ದೊಡ್ಡಡ್ಕ : ಕಾರು – ಬೈಕ್ ಡಿಕ್ಕಿ , ಮತಹಾಕಲು ಬೆಂಗಳೂರಿನಿಂದ ಬರುತ್ತಿದ್ದ ಯುವಕ ಮೃತ್ಯು

0

ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಸಮೀಪ ಬೈಕು ಹಾಗೂ ಕಾರು ನಡುವೆ ಭೀಕರ ಅಪಘಾತ ನಡೆದು ಹಿಂಬದಿ ಬೈಕ್ ಸವಾರ ಮೃತವಾದ ಘಟನೆ ಕಳೆದ ರಾತ್ರಿ ಸಂಭವಿಸಿದೆ.
ಅರಂತೋಡು ಗ್ರಾಮದ ನಿವಾಸಿಯಾಗಿರುವ ಈ ಯುವಕ ಮತದಾನ ಮಾಡಲು ಬೆಂಗಳೂರಿನಿಂದ ಆಗಮಿಸುತ್ತಿದ್ದರು ಎಂದು ಹೇಳಲಾಗಿದೆ.
ಬೈಕ್ ರೈಡ್ ಮಾಡುತ್ತಿದ್ದ ಯುವಕ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.