ನಾರ್ಣಕಜೆ ಮತದಾನ ಕೇಂದ್ರದಲ್ಲಿ ಬಿರುಸಿನ ಮತದಾನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ದ.ಕ.ಜಿ.ಪ.ಹಿ.ಪ್ರಾ. ಶಾಲೆಯ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದೆ.


ಇಲ್ಲಿ ಒಟ್ಟು 1281 ಮತದಾರರಿದ್ದು, 647 ಪುರುಷರು, 634 ಮಹಿಳೆಯರು ಇಂದು ಮತ ಚಲಾಯಿಸಲಿದ್ದಾರೆ.‌

ಇಲ್ಲಿಯೂ ಬೆಳಿಗ್ಗೆಯಿಂದಲೇ ಸರದಿಯ ಸಾಲು ಕಂಡು ಬಂದಿತ್ತು.

ಈ ಮತದಾನ ಕೇಂದ್ರವನ್ನು ಪಿಡಬ್ಯುಡಿ ಮತಗಟ್ಟೆ ಎಂದು ಹೆಸರಿಸಲಾಗಿದೆ. ವಿಶೇಷ ಚೇತನ ಮತದಾರರು ಇಲ್ಲಿ ಹೆಚ್ಚು ಇರುವುದರಿಂದ ಇದನ್ನು ಆ ಹೆಸರಿನಲ್ಲಿ ಗುರುತಿಸಲಾಗಿದೆ‌. ವಿಶೇಷ ಚೇತನರ ಬಗ್ಗೆ ಗೌರವ ಮತ್ತು ಜಾಗೃತಿ ಮೂಡುವ ಹಿನ್ನೆಲೆಯಲ್ಲಿ ಜಾಗೃತಿ ಚಿತ್ರಗಳನ್ನು ಅಳವಡಿಸಲಾಗಿದೆ. ಮತ್ತು ಪ್ರವೇಶ ದ್ವಾರ ವಿಶೇಷವಾಗಿ ನಿರ್ಮಿಸಲಾಗಿದೆ.