ಹೇಮಳ ಬೂತ್‌ನಲ್ಲಿ ಕಾಂಗ್ರೆಸ್‌ಗೆ ಜನ ಇಲ್ಲ

0


ಎಣ್ಮೂರು ಗ್ರಾಮದ ಹೇಮಳ ಶಾಲಾ ಮತದಾನ ಕೇಂದ್ರದಲ್ಲಿ ಮತದಾನ ಕೇಂದ್ರದ ಒಳಗಾಗಲೀ, ಹೊರಗಾಗಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಇಲ್ಲದಿರುವ ಘಟನೆ ವರದಿಯಾಗಿದೆ.

ಮತದಾನ ಕೇಂದ್ರದೊಳಗೆ ಪೋಲಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸಬೇಕಾದರೆ ಆ ಮತದಾನ ಕೇಂದ್ರಕ್ಕೆ ಒಳಪಟ್ಟ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಆಗಬೇಕು. ಈ ಕೇಂದ್ರದ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಯಾರೂ ಕಾರ್ಯಕರ್ತರಿರದಿರುವ ಕಾರಣ ಕಾಂಗ್ರೆಸ್‌ಗೆ ಪೋಲಿಂಗ್ ಏಜೆಂಟ್ ಇಲ್ಲ. ಅದಲ್ಲದೆ ಮತದಾನ ಕೇಂದ್ರಕ್ಕಿಂತ 1೦೦ ಮೀಟರ್ ಅಂತರದಲ್ಲಿ ಪಕ್ದ ಕಾರ್ಯಕರ್ತರು ಕುಳಿತು ಮತದಾರರಿಗೆ ಮಾಹಿತಿ ನೀಡಬಹುದಾದರೂ ಅಲ್ಲಿ ಕಾರ್ಯಕರ್ತರಿಲ್ಲದ ಕಾರಣ ಹೊರಗಡೆಯೂ ಕಾಂಗ್ರೆಸ್‌ಗೆ ಜನ ಇಲ್ಲ. ಇನ್ನು ಈ ಬೂತ್‌ನಲ್ಲಿ ಎಷ್ಟು ಮಂದಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾರೆಂದು ನೋಡಲು ಜೂನ್ ೪ರವರೆಗೆ ಕಾಯಬೇಕಾಗಿದೆ.