ಬಿಸಿಲಿನ ತಾಪಮಾನ ಹೆಚ್ಚಾಗಿದ್ದರೂ ಶಾಂತಿನಗರ ಮತಗಟ್ಟೆಯಲ್ಲಿ ಕಡಿಮೆಯಾಗದ ಮತದಾರರು

0

ಸುಳ್ಯ ನಗರದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳಲ್ಲಿ ಮತಗಟ್ಟೆ ಸಂಖ್ಯೆ 177 ಶಾಂತಿನಗರ ಕೂಡ ಒಂದಾಗಿದೆ.


1,401 ಮತದಾರರನ್ನು ಹೊಂದಿರುವ ಈ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು.


ಇದೀಗ ಮಧ್ಯಾಹ್ನದ ಬಿರು ಬಿಸಿಲಿನ ಸಂದರ್ಭದಲ್ಲಿಯೂ ಸರತಿ ಸಾಲಿನಲ್ಲಿ ನಿಂತಿರುವ ಮತದಾರರಲ್ಲಿ ಯಾವುದೇ ಕಡಿಮೆ ಪ್ರಮಾಣ ಕಂಡು ಬರುತ್ತಿಲ್ಲ.

ಈಗಾಗಲೇ 600ಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿದ್ದು ಶೇಕಡ 50 ಗಡಿಯನ್ನು ದಾಟಿದೆ.