ಅರಂತೋಡು : ಕಾರು ಮತ್ತು ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರರಿಗೆ ಗಾಯ

0

ಅರಂತೋಡು ತೆಕ್ಕಿಲ್ ಸಭಾ ಭವನದ ಬಳಿ ಇಂದು ಸಂಜೆ ಕಾರು ಮತ್ತು ಬೈಕಿನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.


ಅರಂತೋಡು ಸಭಾಭವನದ ಬಳಿ ಮುಖ್ಯರಸ್ತೆಯಲ್ಲಿದ್ದ ಕಾರು ಸಭಾಭವನದ ಗೇಟಿನ ಒಳಗೆ ಬರುತ್ತಿದ್ದ ಸಂದರ್ಭ ಸುಳ್ಯದಿಂದ ಕಲ್ಲುಗುಂಡಿಯತ್ತ ಹೋಗುತ್ತಿದ್ದ ಬೈಕ್ ಡಿಕ್ಕಿಯಾಯಿತು.


ಘಟನೆಯಿಂದ ಬೈಕ್ ಸವಾರ ಮತ್ತು ಹಿಂಬದಿ ಕುಳಿತಿದ್ದ ವೃದ್ಧ ಮಹಿಳೆ ರಸ್ತೆಗೆ ಬಿದ್ದಿದ್ದು ಇಬ್ಬರಿಗೂ ಗಾಯವಾಗಿದ್ದು, ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದೆ ಎಂದು ತಿಳಿದುಬಂದಿದೆ.