ಸುಳ್ಯದ ಜ್ಯೋತಿ ಸರ್ಕಲ್ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ, ಸವಾರರಿಗೆ ಗಾಯ

0

ಸುಳ್ಯದ ಜ್ಯೋತಿ ಸರ್ಕಲ್ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡೂ ಬೈಕಿನ ಸವಾರರಿಗೆ ಗಾಯಗಳಾಗಿದ್ದು, ಎರಡೂ ಗಾಡಿಗಳು ಜಖಂಗೊಂಡ ಘಟನೆ ಏಪ್ರಿಲ್ ೨೯ರಂದು ಮಧ್ಯಾಹ್ನ ಸಂಭವಿಸಿದೆ.


ಬಾಳುಗೋಡು ನಿವಾಸಿ ಯತೀಶ್ ಎಂಬವರು ತಮ್ಮ ಎಫ್‌ಝಿ ಬೈಕಿನಲ್ಲಿ ಸುಳ್ಯದಿಂದ ಬಾಳುಗೋಡಿನತ್ತ ಹೋಗುತ್ತಿದ್ದ ಸಂದರ್ಭ ಜ್ಯೋತಿ ಸರ್ಕಲ್ ಬಳಿ ಮುಂಭಾಗದಿಂದ ಸತೀಶ್ ಎಂಬುವವರು ಚಲಾಯಿಸಿಕೊಂಡು ಬಂದ ಜಿಕ್ಸರ್ ಬೈಕ್ ಗೆ ಪರಸ್ಪರ ಡಿಕ್ಕಿ ಸಂಭವಿಸಿತು.


ಘಟನೆಯಿಂದ ಎರಡು ಬೈಕುಗಳೂ ರಸ್ತೆಗೆ ಬಿದ್ದಿದ್ದು ಯತೀಶ್ ರವರ ಮುಖ ಮತ್ತು ಕೈಗೆ ಗಾಯವಾಗಿದ್ದು ಸತೀಶ್ ರವರಿಗೂ ಸಣ್ಣ ಪುಟ್ಟ ಗಾಯವಾಗಿದೆ.
ಸ್ಥಳೀಯರು ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ಬೈಕುಗಳ ಮುಂಭಾಗ ಜಖಂಗೊಂಡಿದೆ.