ಗೂನಡ್ಕ :ಚಲಿಸುತ್ತಿದ್ದ ಸ್ಕೂಟರ್ ನ ಟಯರ್ ಬ್ಲಾಸ್ಟ್ , ಸ್ಕೂಟರ್ ಪಲ್ಟಿ, ಸವಾರನಿಗೆ ಗಾಯ

0

ಚಲಿಸುತ್ತಿದ್ದ ಸ್ಕೂಟರ್ ನ ಟಯರ್ ಸಿಡಿದು ಸವಾರ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಇಂದು ಸಂಜೆ ಮಾಣಿ ಮೈಸೂರು ಹೆದ್ದಾರಿ ದೊಡ್ಡಡ್ಕ ಗಲ್ಫ್ ಹೋಟೆಲ್ ಬಳಿ ಸಂಭವಿಸಿದೆ.

ಮೂಲತಃ ಕೊಡಗಿನ ಕೊಟ್ಟಮುಡಿ ಭಾಗದ ಹಸೈನಾರ್ ಎಂಬುವವರು ಸುಳ್ಯದಿಂದ ಕೊಟ್ಟಮುಡಿಗೆ ತಮ್ಮ ಸ್ಕೂಟಿಯಲ್ಲಿ ಇಂದು ಸಂಜೆ ಹೋಗುತ್ತಿದ್ದ ಸಂದರ್ಭ ಏಕಾಏಕಿ ಟೈಯರ್ ಸಿಡಿದು ಅವರು ರಸ್ತೆಗೆ ಬಿದ್ದಿದ್ದಾರೆ.
ಈ ವೇಳೆ ಅವರ ತಲೆಗೆ ಗಾಯವಾಗಿದ್ದು ಕೂಡಲೆ ಸ್ಥಳೀಯ ನಿವಾಸಿ ಗಲ್ಫ್ ಹೋಟೆಲ್ ಮಾಲಕ ಹಸೈನ್ ಎನ್ನುವವರು ತಮ್ಮ ಕಾರಿನಲ್ಲಿ ಕೆವಿಜಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.