ಬೊಳುಬೈಲು ಅಪಘಾತ : ಬೈಕ್ ನಲ್ಲಿದ್ದ ದಂಪತಿಗೆ ಗಂಭೀರ ಗಾಯ, ಕಾರು ಜಖಂ, ಗಾಯಾಳುಗಳು ಆಸ್ಪತ್ರೆಗೆ ದಾಖಲು

0

ಬೊಳುಬೈಲಿನಲ್ಲಿ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರರಾದ ದಂಪತಿಗಳಿಗೆ ಗಂಭೀರ, ಹಾಗೂ ಕಾರಿನಲ್ಲಿದ್ದ ಓರ್ವ ಮಹಿಳೆಗೆ ಗಾಯಗಳಾದ ಘಟನೆ ಇಂದು ಸಂಜೆ ಸಂಭವಿಸಿದೆ ಗಾಯಾಳುವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಶಿವ ಅಂಬ್ಯುಲೆನ್ಸ್‌ನಲ್ಲಿ ತರಲಾಯಿತು.

ಬೈಕಿನಲ್ಲಿದ್ದ ದಂಪತಿಗಳು ಮೂಲತಃ ಬಂಟ್ವಾಳದವರಾಗಿದ್ದು ಮೇನಾಲದಲ್ಲಿ ನಡೆದ ಕುಟುಂಬವೊಂದರ ಮದುವೆಯ ಡಿನ್ನರ್ ಕಾರ್ಯಕ್ರಮಕ್ಕೆ ಸುಳ್ಯಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
ಕಾರ್ಯಕ್ರಮ ಮುಗಿಸಿ ಇಂದು ಸಂಜೆ ಬಂಟ್ವಾಳ ಕಡೆ ಹೋಗುತ್ತಿದ್ದ ಸಂದರ್ಭ ಧರ್ಮಸ್ಥಳ ಮೂಲದ ಕಾರು ಮುಖಮುಖಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಘಟನೆಯಿಂದ ಬೈಕಿನಲ್ಲಿದ್ದ ಗುರುಪ್ರಸಾದ್ ರವರ ತಲೆಗೆ ತೀವ್ರ ಗಾಯವಾಗಿದ್ದು ಅವರ ಪತ್ನಿ ಶಶಿಕಲಾ ಎಂಬುವರಿಗೂ ತೀವ್ರ ಗಾಯವಾಗಿದೆ.

ಕಾರಿನಲ್ಲಿ ಐವರು ಇದ್ದು ಮುಂಭಾಗದಲ್ಲಿ ಕುಳಿತಿದ್ದ ವಿಜಯಲಕ್ಷ್ಮಿ ಎಂಬುವರಿಗೆ ಸಣ್ಣ ಪುಟ್ಟ ಗಾಯವಾಗಿ ಉಳಿದವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಘಟನೆಯಿಂದ ಕಾರು ಸಂಪೂರ್ಣವಾಗಿ ನಜ್ಜು ಗುಜ್ಜಾಗಿದ್ದು ಭೀಕರ ದೃಶ್ಯ ಕಂಡುಬರುತ್ತದೆ.