ಸುಳ್ಯ ಕೆ.ಎಫ್.ಡಿ.ಸಿ. ವಸತಿಗೃಹದಲ್ಲಿ ಕಳ್ಳತನ : ದೂರು ದಾಖಲು

0

ಸುಳ್ಯ ಕೆ ಎಫ್ ಡಿ ಸಿ ಕ್ವಾಟರ್ಸ್ ನಲ್ಲಿ ಮನೆಯಲ್ಲಿ ಇರಿಸಿದ್ದ ನಗ ನಾಣ್ಯವನ್ನು ಮನೆಯ ಬಾಗಿಲು ಮುರಿದು ಕಳ್ಳರು ಕದ್ದೊಯ್ದ ಘಟನೆ ಎ.29ರಂದು ನಡೆದಿದೆ.

ನಾಚಪ್ಪ.ಎ.ಸಿ ಎಂಬುವವರು ಕೆ.ಎಫ್.ಡಿ.ಸಿ ಕ್ವಾಟ್ರಸ್, ವಾಸ್ತವ್ಯವಿದ್ದು ಎ.29ರಂದು ಬೆಳಗ್ಗೆ ನಾಚಪ್ಪರು ಮತ್ತು ಅವರ ಪತ್ನಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು.


ಮಧ್ಯಾಹ್ನದ ವೇಳೆಗೆ ಮನೆಗೆ ಬಂದು ಒಳಗಡೆ ಹೋದಾಗ ಮನೆಯ ಹಿಂಬದಿಯ ಬಾಗಿಲಿನ ಕೆಳಬದಿಯನ್ನು ಯಾರೋ ಮುರಿದಿರುವುದನ್ನು ಕಂಡು ಬಂದಿದ್ದು, ಗಾಬರಿಗೊಂಡ ಮಹಿಳೆಯು ಮನೆಯ ಬೆಡ್ ರೂಮ್ ಗೆ ಹೋಗಿ ನೋಡಿದಾಗ ಬೆಡ್ ರೂಮ್ ನಲ್ಲಿದ್ದ ಕಪಾಟಿನ ಬಾಗಿಲನ್ನು ತೆರೆದಿದ್ದು, ಕರಡಿಕೆಯಲ್ಲಿ ಇಟ್ಟಿದ್ದ 2 ಗ್ರಾಂ ತೂಕದ ಹಳೆಯ ಬೆಂಡೋಲೆ – 1 ಜೊತೆ, ತಲಾ 2 ಗ್ರಾಂ ತೂಕದ ಹಳೆಯ ಚಿನ್ನದ ಉಂಗುರ -2, 8 ಗ್ರಾಂ ತೂಕದ ಹಳೆಯ ಚಿನ್ನದ ತಾಳಿ ಚೈನು -1, 2 ಗ್ರಾಂ ತೂಕದ ಹಳೆಯ ಚಿನ್ನದ ಸರ -1, ಹಾಗೂ ಅಲ್ಲೇ ಇಟ್ಟಿದ 30000/- ರೂ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಒಟ್ಟು ಚಿನ್ನವು 16 ಗ್ರಾಂ ಇದ್ದು, ಅದರ ಅಂದಾಜು ಮೌಲ್ಯ 64000/- ರೂ ಆಗಿರುತ್ತದೆ. ನಗದು ಸೇರಿ ಒಟ್ಟು 94000/- ರಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ.

ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.