ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಕುಡೆಕಲ್ಲು ವಯನಾಟ್ ಕುಲವನ್ ದೈವಸ್ಥಾನದಲ್ಲಿ ಹರಕೆಯ ಮರೋಟ್ ಸಮರ್ಪಣೆ

0

ಆಲೆಟ್ಟಿ ಕುಡೆಕಲ್ಲು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕರ್ನಾಟಕ ರಾಜ್ಯ ಸರಕಾರದ ಉಪಮುಖ್ಯಮಂತ್ರಿ ಪರವಾಗಿ ಹರಕೆಯ ಮರೋಟ್ ಮೇ.5 ರಂದು (ಪುದಿಯೊಡ್ಕಲ್ ) ಸಮರ್ಪಿಸಲಾಯಿತು.

2019 ರಲ್ಲಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಬಂಧನ ಮಾಡಿದ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ತೇಜಕುಮಾರ್ ಕುಡೆಕಲ್ಲು ಡಿ.ಕೆ.ಶಿ ಯವರು ಕೇಸಿನಿಂದ ದೋಷ ಮುಕ್ತರಾಗಬೇಕು ಹಾಗೂ ಜೈಲಿನಿಂದ ಬಿಡುಗಡೆ ಯಾಗಬೇಕೆಂಬುದಾಗಿ ದೈವದ ಮೋರೆ ಹೋದರು. ದೈವರ ಮೊರೆ ಹೋದ ತರುವಾಯ ಪ್ರಕರಣದಲ್ಲಿ ಡಿ.ಕೆ‌ ಶಿವಕುಮಾರ್ ರವರು ದೋಷ ಮುಕ್ತರಾಗಿ ಜೈಲಿನಿಂದ ಬಿಡುಗಡೆ ಯಾಗಿ ಹೊರಬಂದಿದ್ದರು. ಆ ಸಂದರ್ಭದಲ್ಲಿ ಅರಿಕೆ ಮಾಡಿಕೊಂಡ ಪ್ರಕಾರ ಹರಕೆಯ ಮರೋಟ್ ನ್ನು ದೈವಸ್ಥಾನದಲ್ಲಿ ದರ್ಶನ ಪಾತ್ರಿಯವರ ಸಮ್ಮುಖದಲ್ಲಿ ಸಮರ್ಪಿಸಲಾಯಿತು. ಡಿ.ಕೆ.ಶಿ ಯವರ ಪರವಾಗಿ ಲೀಗಲ್ ಅಡ್ವೈ ಸರ್ ಅಡ್ವಕೇಟ್ ಯೋಗೇಂದ್ರ ವಿಕ್ರಮ್ ಗೌಡ ರವರು ಬೆಂಗಳೂರಿನಿಂದ ಆಗಮಿಸಿ ದರ್ಶನ ಪಾತ್ರಿಯವರಿಂದ ಪ್ರಸಾದ ಸ್ವೀಕರಿಸಿದರು.


ಕುಡೆಕಲ್ಲುಮನೆತತನದ
ಹಿರಿಯರಾದ ವಾಸುದೇವ ಗೌಡ ಕುಡೆಕಲ್ಲು, ರತ್ನಾಕರ ಗೌಡ ಕುಡೆಕಲ್ಲು,
ಆಡಳ್ತೆದಾರ ಬಿಪಿನ್ ಕುಡೆಕಲ್ಲು,ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸತ್ಯಕುಮಾರ್ ಆಡಿಂಜ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆಯಾಗಿ ಭೋಜನ ಪ್ರಸಾದ ವಿತರಿಸಲಾಯಿತು.