ಎಲಿಮಲೆ ಜ್ಞಾನದೀಪ ಶಾಲೆಗೆ ಶೇ.100 ಫಲಿತಾಂಶ

0

2023-24ನೇ ಸಾಲಿನಲ್ಲಿ ನಡೆದ ಎಲಿಮಲೆ ಸರಕಾರಿ ಶಾಲೆಯ ಹತ್ತನೇ ತರಗತಿ ಫಲಿತಾಂಶ ಬಂದಿದ್ದು ಈ ಬಾರಿ ಶೇ.100 ಫಲಿತಾಂಶ ದಾಖಲಿಸಿದೆ.

ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 7 ಹುಡುಗಿಯರು ಮತ್ತು 16 ಹುಡುಗರು ಪರೀಕ್ಷೆ ಬರೆದಿದ್ದರು. ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.‌ ಅಮೃತ ಆರ್.ಹೆಚ್. 584 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.