ಗುತ್ತಿಗಾರಿನ ಕುರಿಯಕೋಸ್ ಶಾಲೆಗೆ ಶೇ.100 ಫಲಿತಾಂಶ

0

2023-24ನೇ ಸಾಲಿನಲ್ಲಿ ಗುತ್ತಿಗಾರಿ ಕುರಿಯಕೋಸ್ ಪ್ರೌಢ ಶಾಲೆಯ ಹತ್ತನೇ ತರಗತಿ ಫಲಿತಾಂಶ ಬಂದಿದ್ದು ಈ ಬಾರಿ ಶೇ.100 ಫಲಿತಾಂಶ ದಾಖಲಿಸಿದೆ.

ಒಟ್ಟು 27 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 11 ಹುಡುಗಿಯರು ಮತ್ತು 16 ಹುಡುಗರು ಪರೀಕ್ಷೆ ಬರೆದಿದ್ದರು. ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.‌

ಮಡಪ್ಪಾಡಿಯ ಗೋಳಿಯಡಿ ಹಿತ 617 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.