ಅಡ್ಪಂಗಾಯ ಅಯ್ಯಪ್ಪ ಸನ್ನಿಧಾನದಲ್ಲಿ ಸಂಕ್ರಮಣ ಪ್ರಯುಕ್ತ ದುರ್ಗಾಪೂಜೆ ಹಾಗೂ ಭಜನಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ

0

ಅಡ್ಪಂಗಾಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸಂಕ್ರಮಣ ಪೂಜೆಯು ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯ ರವರ ನೇತೃತ್ವದಲ್ಲಿ ಮೇ.17 ರಂದು ನಡೆಯಿತು.
ಬೆಳಗ್ಗೆ ಪುರೋಹಿತರಿಂದ ಗಣಪತಿ ಹವನ ಹಾಗೂ ವೈದಿಕ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ದುರ್ಗಾದೇವಿ ಪೂಜೆಯು ನಡೆದು ಬಳಿಕ ಗುರುಸ್ವಾಮಿಯವರಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಸೇವೆಯೊಂದಿಗೆ ಮಹಾ ಮಂಗಳಾರತಿ ನೆರವೇರಿತು.


ಈ ಸಂದರ್ಭದಲ್ಲಿ ಆಲೆಟ್ಟಿ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆಯು ನಡೆಯಿತು.


ಈ ಸಂದರ್ಭದಲ್ಲಿ ಗುರುಸ್ವಾಮಿಯವರಿಂದ ವಿವಿಧ ಕ್ಷೇತ್ರದ ಸಾಧಕರಾದ ಅತ್ಯಾಡಿ ಲೋಕಯ್ಯ ಗೌಡ, ಕೆ.ಟಿ.ವಿಶ್ವನಾಥ, ಶೈಲೇಶ್ ಅಂಬೆಕಲ್ಲು ರವರನ್ನು ಸನ್ಮಾನಿಸಲಾಯಿತು. ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯು ನಡೆಯಿತು.


ಮರುದಿನ ಪ್ರಾತ:ಕಾಲದಲ್ಲಿ
ಗುರುಸ್ವಾಮಿಯವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಮಾಡುವ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟು ಕಟ್ಟುವ ಕಾರ್ಯಕ್ರಮ
ನಡೆದು ಯಾತ್ರೆ ಕೈಗೊಳ್ಳಲಾಯಿತು.