ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದು ಐ ಲವ್ ಯು ಎಂದ ಯುವಕ

0

ವಿದ್ಯಾರ್ಥಿನಿಯ ತಂದೆ ಬಂದಾಗ ಪರಾರಿ :ಪೊಲೀಸ್ ಕೇಸ್

ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ಯುವಕನೊಬ್ಬ ಐ ಲವ್ ಯು ಎಂದು ಹೇಳತೊಡಗಿದಾಗ ವಿದ್ಯಾರ್ಥಿನಿ ತಂದೆಗೆ ಫೋನ್ ಮಾಡಿ ತಿಳಿಸಿದ ಹಾಗೂ ವಿದ್ಯಾರ್ಥಿನಿಯ ತಂದೆ ಬಂದಾಗ ಆ ಯುವಕ ಓಡಿ ಪರಾರಿಯಾದ ಘಟನೆ ಮೇ. 21ರಂದು ಸಂಜೆ ನಡೆದಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.

ಸುಳ್ಯ ಕಲ್ಲುಮುಟ್ಲು ಕಡೆಯ ಯುವತಿಯೊಬ್ಬಳು ಕಂಪ್ಯೂಟರ್ ತರಗತಿ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಗಾಂಧಿನಗರದಲ್ಲಿ ಹೋಗುತ್ತಿದ್ದಾಗ ಅಪರಿಚಿತ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದು ಮಾತನಾಡಲು ಪ್ರಯತ್ನಿಸಿ, ಐ ಲವ್ ಯು ಎಂದನೆನ್ನಲಾಗಿದೆ. ಇದರಿಂದ ಕಿರಿಕಿರಿ ಅನುಭವಿಸಿದ ಯುವತಿ ಗಾಂಧಿನಗರದಲ್ಲಿಯೇ ಇರುವ ತನ್ನ ತಂದೆಗೆ ಫೋನ್ ಮಾಡಿದಳು. ತಕ್ಷಣ ತಂದೆ ಬಂದರು. ತಂದೆ ಬಂದ ಕೂಡಲೇ ಯುವಕ ಓಟಕಿತ್ತ. ತಂದೆ ಆತನನ್ನು ಹಿಂಬಾಲಿಸಿದರು. ಆ ಕಿಡಿಗೇಡಿ ಯುವಕ ಹೋಟೇಲೊಂದರ ಒಳಹೊಕ್ಕದ್ದನ್ನು ಕಂಡು ಇವರೂ ಬೆನ್ನಟ್ಟಿದರು. ಆತ ಹೋಟೆಲ್ ನ ಹಿಂಬದಿ ಬಾಗಿಲಿನ ಮೂಲಕ ಓಡಿ ತಪ್ಪಿಸಿಕೊಂಡನೆನ್ನಲಾಗಿದೆ.


ಸಂಜೆ ಮನೆಯವರು ಭಜರಂಗದಳದವರ ಮಾರ್ಗದರ್ಶನದಲ್ಲಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಆ ಯುವಕನಿಗಾಗಿ ಹುಡುಕಾಟ ಆರಂಭಿಸಿದರು. ಸಿ.ಸಿ. ಕ್ಯಾಮೆರಾಗಳ ಆಧಾರದಲ್ಲಿ ಆ ಯುವಕನ ಗುರುತು ಪತ್ತೆಯಾಗಿರುವುದಾಗಿಯೂ, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವರೆಂದೂ ಹೇಳಲಾಗುತ್ತಿದೆ.