ಯೇನೆಕಲ್ಲು ವೆಂಕಟ್ರಮಣ ಗೌಡ ಮುತ್ಲಾಜಡ್ಕ ವಿಷ ಸೇವಿಸಿ‌ ಮೃತ್ಯು

0

ಯೇನೆಕಲ್ಲು ಗ್ರಾಮದ ಮುತ್ಲಾಜಡ್ಕ ವೆಂಕಟ್ರಮಣ ಗೌಡ ಬರೆಮೇಲು ವಿಷ ಪದಾರ್ಥ ಸೇವಿಸಿ, ಅಶ್ವಸ್ಥಗೊಂಡು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅಶ್ವತ್ಥಗೊಂಡ ವೆಂಕಟ್ರಮಣ ಗೌಡರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ. 22ರಂದು ನಿಧನರಾದರು. ಇವರು ಇತ್ತೀಚೆಗೆ ಬಿದ್ದು ಕೈ ಮುರಿತಕ್ಕೊಳಗಾಗಿರುವುದು ಮತ್ತು ಆರೋಗ್ಯ ಸಮಸ್ಯೆ ಇದ್ದ ಕಾರಣ ಆತ್ಮಹತ್ಯೆಗೆ ಶರಣಾಗಿರುವುದಾಗಿ ಶಂಕಿಸಲಾಗಿದೆ. ಇವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಭವಾನಿ, ಪುತ್ರರಾದ ಪಂಜ ಗ್ರಾ.ಪಂ. ಸಿಬ್ಬಂದಿ ತಾರಾನಾಥ ಬರೆಮೇಲು, ಮಾಧವ ಬರೆಮೇಲು, ಪುತ್ರಿ ಶ್ರೀಮತಿ ಜಯಂತಿ ಹರೀಶ್ ಹಾಳೆಮಜಲು, ಸಹೋದರಾದ ಹೊನ್ನಪ್ಪ ಗೌಡ, ಬಾಲಕೃಷ್ಣ ಗೌಡ ಮತ್ತು ಮೋನಪ್ಪ ಗೌಡ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.