ಜಾಲ್ಸೂರಿನಲ್ಲಿ ಸದ್ಗುರು ಡಾ. ಶಶಿಕಾಂತಮಣಿ ಸ್ವಾಮೀಜಿ ಭಕ್ತವೃಂದ ಘಟಕ ಉದ್ಘಾಟನೆ

0

ಜಾಲ್ಸೂರಿನ ಕೆನರಾ ಬ್ಯಾಂಕ್ ಪಕ್ಕದ ಶ್ರೀ ಆದಿಶಕ್ತಿ ಆರ್ಕೇಡ್ ನಲ್ಲಿ ಸದ್ಗುರು ಡಾ.ಶಶಿಕಾಂತಮಣಿ ಸ್ವಾಮೀಜಿ ಭಕ್ತವೃಂದ ಘಟಕವು ಮೇ.24 ರಂದು ಉದ್ಘಾಟನೆಗೊಂಡಿತು.

ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಇಲ್ಲಿ ಮುಂದಿ‌ನ ದಿನಗಳಲ್ಲಿ ಪ್ರತೀ ಗುರುವಾರ , ಶುಕ್ರವಾರ ಹಾಗೂ ಶನಿವಾರ ಗಣೇಶ್ ನಿಡ್ಲೆ ಅವರ ನೇತೃತ್ವದಲ್ಲಿ ಜ್ಯೋತಿಷ್ಯ ಪ್ರಶ್ನೆ ಚಿಂತನೆ ಮತ್ತು ಪರಿಹಾರ ಕಾರ್ಯ ನಡೆಯಲಿದೆ.

ಈ ಸಂದರ್ಭದಲ್ಲಿ ಕೃಷ್ಣಪ್ಪ ಶೇಕೆಹಿತ್ಲು ಕುಳ, ಮೋನಪ್ಪ ನಿಡ್ಲೆ, ಮೋನಪ್ಪ ಎಡಮಂಗಲ ಸೇರಿದಂತೆ ಜಾಲ್ಸೂರು ಘಟಕದ ಭಕ್ತವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು.