ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ : ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

0

ಗ್ರಾಮ ಪಂಚಾಯತ್ ಬೆಳ್ಳಾರೆ ,ಗ್ರಾಮ ಪಂಚಾಯತು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ. 18 ರಂದು ರಾಜೀವ ಗಾಂಧೀ ಸೇವಾ ಕೇಂದ್ರದಲ್ಲಿ ಜರಗಿತು.

ಗ್ರಾಮ ಪಂಚಾಯತ್ ಬೆಳ್ಳಾರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ. ವಿ. ಯವರು ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿದೆ ಎಂದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಮಣಿಕಂಠ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಶಮಿತಾ ಪಿ. ರೈ ಯವರು ಉಪಸ್ಥಿತರಿದ್ದರು.

ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಕು. ಕೇತನ ಮತ್ತು ಕು. ಚಿನ್ಮಯಿ ಸರಸ್ವತಿ ಪ್ರಾರ್ಥಿಸಿ ಕು. ಮಾನ್ವಿ ಕೆ ಎಸ್ ಸ್ವಾಗತಿಸಿ ಕು. ಪುಣ್ಯಶ್ರೀ ವಂದಿಸಿದರು, ಕು. ತನುಶ್ರೀ ಎಸ್ ಕೆ ಕಾರ್ಯಕ್ರಮ ನಿರೂಪಿಸಿದರು, ನಿರಂತರ 10 ದಿನ ನಡೆದ ಶಿಬಿರದಲ್ಲಿ ಪದ್ಮನಾಭ ಕಲಾಸುಮ ಆರ್ಟ್ಸ್, ಶಿಕ್ಷಕ ಲಿಂಗಪ್ಪ ಬೆಳ್ಳಾರೆ, ಹಿರಿಯ ಚಿತ್ರ ಕಲಾವಿದ ಶ್ರೀ ಐತ್ತ ಪಾಟಾಜೆ, ಜೇಸಿ ಶಾಫಿ ಕಲ್ಲೇರಿ, ಪತಂಜಲಿ ಯೋಗ ಕೇಂದ್ರದ ಶ್ರೀಮತಿ ಕವಿತಾ ಅಜಪಿಲ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ ಎನ್ ಭಟ್, ಡ್ಯಾನ್ಸ್ ಬೀಟ್ಸ್ ಜೀವನ್ ತಡಗಜೆ , ಶ್ರೀಮತಿ ಪರಿಮಳ ಪರ್ಲಿಕಜೆ ನಿಶ್ಮಿತಾ ಬೀಡು, ಡಿ ಜಿ ವಿಕಸನ ಜಿಲ್ಲಾ ಸಂಯೋಜಕರಾದ ಲವೀಶ್, ಬೆಳ್ಳಾರೆ ಕಮ್ಯುನಿಟಿ ಹೆಲ್ತ್ ಆಫೀಸರ್ ಹವ್ಯಶ್ರೀ ಚಿತ್ರಕಲಾ ಶಿಕ್ಷಕಿ ಶ್ರೀಮತಿ ಶಮಿತಾ ರೈ ಪನ್ನೆ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.