ತೊಡಿಕಾನ: ಕುತ್ತಮೊಟ್ಟೆ ಕುಟುಂಬದ ಧರ್ಮ ನಡಾವಳಿ

0

ತೊಡಿಕಾನ ಗ್ರಾಮದ ಕುತ್ತಮೊಟ್ಟೆ ಕುಟುಂಬದ ಅಭಿವೃದ್ಧಿ ಟ್ರಸ್ಟ್ ರಿ. ವತಿಯಿಂದ ಕುತ್ತಮೊಟ್ಟೆ ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ವಿಷ್ಣುಮೂರ್ತಿ , ಶ್ರೀ ಪಾಲಿಸರಾಯ ದೈವ ಹಾಗೂ ಪರಿವಾರ ದೈವಗಳ ಧರ್ಮ ನಡಾವಳಿಯು ಮೇ.23 ಮತ್ತು 24ರಂದು ಜರುಗಿತು.

ಮೇ.23ರಂದು ಸಂಜೆ ದೈವಗಳ ಭಂಡಾರ ತೆಗೆದು, ರಾತ್ರಿ ಶ್ರೀ ಕಾರ್ನೂರು, ಸತ್ಯದೇವತೆ ದೈವಗಳ ಕೋಲೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಬಳಿಕ ಶ್ರೀ ಪಾಷಾಣಮೂರ್ತಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಕುಪ್ಪೆ ಪಂಜುರ್ಲಿ, ಶ್ರೀ ಗುಳಿಗ ದೈವಗಳ ಕೋಲೋತ್ಸವ ನಡೆಯಿತು.

ಮೇ.24ರಂದು ಬೆಳಿಗ್ಗೆ ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ವಿಷ್ಣುಮೂರ್ತಿ ಮತ್ತು ಪಾಲಿಸರಾಯ ದೈವಗಳ ಕೋಲೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕುತ್ತಮೊಟ್ಟೆ ಕುಟುಂಬದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕುತ್ತಮೊಟ್ಟೆ ಕುಟುಂಬದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕುಟುಂಬದ ಯಜಮಾನ ಚಿನ್ನಪ್ಪ ಗೌಡ ಕುತ್ತಮೊಟ್ಟೆ, ಅಭಿವೃದ್ಧಿ ಟ್ರಸ್ಟ್ ಖಜಾಂಜಿ ಕರುಣಾಕರ ಕೆ., ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಕೆ.ಜೆ., ಶಾರದಾ ಕೆ., ಸದಸ್ಯರುಗಳಾದ ಮಹೇಶ್ ಕೆ., ಪ್ರಶಾಂತ್ ಡಿ.ಎಸ್., ತೀರ್ಥರಾಮ ಕೆ., ನವೀನ ಕೆ., ಪವನ್ ಕೆ.ವಿ., ದಯಾನಂದ ಕೆ. ಸೇರಿದಂತೆ ಕುತ್ತಮೊಟ್ಟೆ ಕುಟುಂಬದ ಅಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು, ಕುತ್ತಮೊಟ್ಟೆ ಕುಟುಂಬಸ್ಥರು ಸೇರಿದಂತೆ ಊರ – ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.