ಚೆಂಬು: ಅತ್ಯಾಡಿಯಲ್ಲಿ ಮರಬಿದ್ದು ರಸ್ತೆ ಬ್ಲಾಕ್ – ಮರ ತೆರವುಗೊಳಿಸಿದ ಊರವರು

0

ಚೆಂಬು ಗ್ರಾಮದ ಅತ್ಯಾಡಿಯಲ್ಲಿ ಭಾರೀ ಗಾತ್ರದ ಮರ ರಸ್ತೆಯ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ರಸ್ತೆ ಬ್ಲಾಕ್ ಆದ ಹಾಗೂ ಇದರಿಂದ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಊರವರು ಸೇರಿ ಮರವನ್ನು ತೆರವುಗೊಳಿಸಿದ ಘಟನೆ ಮೇ.24ರಂದು ಬೆಳಿಗ್ಗೆ ಸಂಭವಿಸಿದೆ.

ಚೆಂಬು ಗ್ರಾಮದ ಅತ್ಯಾಡಿ ಕಾಳಪ್ಪಕಜೆ ಎಂಬಲ್ಲಿ ಭಾರೀ ಗಾತ್ರದ ಮರವೊಂದು ಉರುಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಇದರಿಂದ ಹಲವು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು.

ಈ ಸಂದರ್ಭದಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ಜೀಪು ಸೇರಿದಂತೆ ಮತ್ತಿತರ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣಗೊಂಡಿತು. ಬಳಿಕ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿ, ವಿದ್ಯುತ್ ದುರಸ್ತಿ ಪಡಿಸಿದರೆಂದೂ, ಊರವರು ಸೇರಿ ಮರವನ್ನು ತೆರವುಗೊಳಿಸಿದರೆಂದು ತಿಳಿದುಬಂದಿದೆ.