ಕನಕಮಜಲು: ಪಂಜಿಗುಂಡಿ ಅಂಗವಿಕಲ ಯುವಕನಿಗೆ ಕನಕಮಜಲು ಸಹಕಾರಿ ಸಂಘದ ವತಿಯಿಂದ ಧನಸಹಾಯ

0

ಕನಕಮಜಲು ಗ್ರಾಮದ ಪಂಜಿಗುಂಡಿಯಲ್ಲಿ ಅಡಿಕೆ ಮರ ಬೆನ್ನಿಗೆ ಬಿದ್ದು, ಅಂಗವಿಕಲರಾಗಿರುವ ಯುವಕ ಯತೀಶ್ ಅವರಿಗೆ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ವತಿಯಿಂದ ಧನಸಹಾಯಯನ್ನು ಮೇ.24ರಂದು ಅವರ ಮನೆಯಲ್ಲಿ ಹಸ್ತಾಂತರಿಸಲಾಯಿತು.

ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಯತೀಶ್ ಅವರ ತಾಯಿ ಸಹಕಾರಿ ಸಂಘದ ಸದಸ್ಯೆ ಶ್ರೀಮತಿ ಉಷಾ ಅವರಿಗೆ ಧನಸಹಾಯ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ‌ನಿರ್ದೇಶಕರುಗಳಾದ ಗಣೇಶ್ ಅಂಬಾಡಿಮೂಲೆ, ಶೇಷಪ್ಪ ನಾಯ್ಕ ಕಜೆಗದ್ದೆ, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ ಹಾಗೂ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಉಪಸ್ಥಿತರಿದ್ದರು.