ಎಣ್ಮೂರು ಗರಡಿಯಲ್ಲಿ ಪತ್ತನಾಜೆ ಕಾರ್ಯಕ್ರಮ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಗರಡಿಯಲ್ಲಿ ಮೇ.24 ರಂದು ಪತ್ತನಾಜೆ ಕಾರ್ಯಕ್ರಮವು ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ನಡೆಯಿತು.
ವಿಶೇಷ ತಂಬಿಲ ಸೇವೆ, ದರ್ಶನ ಸೇವೆ, ಬೈದರುಗಳಿಂದ ಅಭಯ ನುಡಿ, ಗಂಧ ಪ್ರಸಾದ ವಿತರಣೆ ಬಳಿಕ ಭೋಜನ ಪ್ರಸಾದ ನಡೆಯಿತು.


ಈ ಸಂದರ್ಭದಲ್ಲಿ ಕಟ್ಟಬೀಡು ಕುಟುಂಬಸ್ಥರು, ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಅವರ ಪತ್ನಿ ಶ್ರೀಮತಿ ಪದ್ಮ ಆರ್. ಶೆಟ್ಟಿ ಕಟ್ಟಬೀಡು, ಗರಡಿ ಮಾಹಿತಿ ದಾರ ಲೋಕನಾಥ ರೈ ಎನ್. ಜಿ. ಎಣ್ಮೂರು, ಸ್ಥಳೀಯರು, ಭಕ್ತಾದಿಗಳು ಉಪಸ್ಥಿತರಿದ್ದರು.


ದೇಸ 10 ನೇ ಪತ್ತನಾಜೆ ಕಾರ್ಯಕ್ರಮ ನಡೆದರೆ ಮೂರು ತಿಂಗಳು ಬಾಗಿಲು ತೆರೆಯುವಂತಿಲ್ಲ. ಭಕ್ತಾದಿಗಳು ಆಗಮಿಸಿ ಮನಸಿನ ಕೋರಿಕೆ ಬೇಡಿಕೆ ಗಳನ್ನು ಗರಡಿ ಚಾವಡಿಯಲ್ಲಿ ಮನಸಿನ ಕೋರಿಕೆಯಂತೆ ಪ್ರಾರ್ಥನೆ ಸಲ್ಲಿಸಬಹುದು. ದಿನ ಮುಂಚೆ ತಿಳಿಸಿದಲ್ಲಿ ಪ್ರಾರ್ಥನೆ ಮಾಡಬಹುದು, ಚೌತಿ ಯ ದಿನದಂದು ಬಾಗಿಲು ತೆರೆದು ಚೌತಿ ಕಾರ್ಯಕ್ರಮದ ವಿಶೇಷ ಪೂಜೆ , ಪ್ರಾರ್ಥನೆಗೆ ಅವಕಾಶವಿದೆ ಎಂದು ಸಮಿತಿ ತಿಳಿಸಿದೆ.

(ಬರಹ: ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ)